Wednesday, January 22, 2025

ಸರ್ಕಾರ ನಡೆಯುತ್ತಿಲ್ಲ, ನಾನೇನು ಮಾಡಲಿ: ಸಚಿವ ಮಾಧುಸ್ವಾಮಿ ಆಡಿಯೋ

ಬೆಂಗಳೂರು: ರಾಜ್ಯ ಸರ್ಕಾರ ನಡೆಯುತ್ತಿಲ್ಲ ಕಣಪ್ಪ, ಏಳೆಂಟು ತಿಂಗಲು ಇದೆ ಎಂದು ಮ್ಯಾನೇಜ್ ಮಾಡ್ತಾ ಇದ್ದೀವಿ ಎಂದು ಸಚಿವ ಜೆ.ಸಿ ಮಾಧು ಸ್ವಾಮಿ ಅವರ ಆಡಿಯೋ ಪವರ್​ ಟಿವಿಗೆ ಲಭ್ಯವಾಗಿದೆ.

ಸಾಮಾಜಿಕ ಹೋರಾಟಗಾರ ಭಾಸ್ಕರ್ ಅವರು ಸಚಿವರಿಗೆ ಪೋನ್ ಮುಖಾಂತರ ಮಾತನಾಡಿ, ಬ್ಯಾಂಕ್ ಲೋನ್ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿಗಳು ಹಣ ಪೀಕುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಸಚಿವರು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಮಟ್ಟದ ಸೊಸೈಟಿಗಳಲ್ಲಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿರುವುದು ನನಗೂ ಗೊತ್ತು. ನಾನು ಸಹ ಇಲ್ಲಿ ಹಣ ಕೊಟ್ಟಿದ್ದೇನೆ. ಈ ಬಗ್ಗೆ ಸಚಿವ ಸೋಮಶೇಖರ್ ಅವರಿಗೆ ಹೇಳಿದ್ದೇವೆ ಕ್ರಮವಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ಹತಾಶೆಯ ನುಡಿಗಳನ್ನಾಡಲಿದ್ದಾರೆ.

RELATED ARTICLES

Related Articles

TRENDING ARTICLES