Monday, December 23, 2024

ಶಿವಣ್ಣ, ರವಿಚಂದ್ರನ್​ ಅವ್ರ 60ರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಚಿಂತನೆ

ಬೆಂಗಳೂರು: ಕನ್ನಡ ಚಿತ್ರರಂಗವೇ ಮನೆ ಹಬ್ಬದಂತೆ ಅಂಬರೀಶ್ ಸಂಭ್ರಮವನ್ನು ಆಚರಿಸಿದ ದಿನವನ್ನು ಇಂದಿಗೂ ಚಿತ್ರಪ್ರೇಮಿಗಳು ಮರೆತಿಲ್ಲ. ಇದೀಗ ಸ್ಯಾಂಡಲ್​ವುಡ್​​ನ ಸೆಂಚುರಿ ಸ್ಟಾರ್​ ಶಿವಣ್ಣ, ಹಾಗೂ ಕ್ರೇಜಿಸ್ಟಾರ್​ ರವಿಚಂದ್ರನ್​ ಅವ್ರ 60ರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸೋಕೆ ತಯಾರಿ ನಡೆಸಿದೆ.

ಅಂಬಿ ಸಂಭ್ರಮದಂತೆ ದೊಡ್ಡ ಕಾರ್ಯಕ್ರಮದೊಂದಿಗೆ ಭಾರತೀಯ ಚಿತ್ರರಂಗದ ಸ್ಟಾರ್​ ಕಲಾವಿದರ ಸಮ್ಮುಖದಲ್ಲಿ ಆಚರಿಸಲು ಬಿಗ್​ ಫಿಲ್ಮ್​ ಚೇಂಬರ್​ ಪ್ಲ್ಯಾನ್​​ ಮಾಡ್ತಿದೆ​​​​​​.

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​​​, ಕ್ರೇಜಿಸ್ಟಾರ್​​ ರವಿಚಂದ್ರನ್​ಗೆ 60 ವರ್ಷ ತುಂಬಿದ ಹಿನ್ನೆಲೆ ಫಿಲ್ಮ್​ ಚೇಂಬರ್​​ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ ನಡೆಸ್ತಿದೆ.

RELATED ARTICLES

Related Articles

TRENDING ARTICLES