Friday, December 27, 2024

ನಾಗ್ಪುರದ RSS ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೋಹನ್ ಭಾಗವತ್

ನಾಗ್ಪುರ: ‘ಹರ್ ಘರ್ ತಿರಂಗ’ ಅಭಿಯಾನದ ಅಂಗವಾಗಿ ನಾಗ್ಪುರದ ಮಹಲ್ ಪ್ರದೇಶದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಶನಿವಾರ ರಾಷ್ಟ್ರಧ್ವಜಾರೋಹಣ ಮಾಡಿದರು.

ಈ ವೇಳೆ ನಾಗ್ಪುರ ಜಿಲ್ಲಾಧಿಕಾರಿ ಆರ್ ವಿಮಲಾ ಅವರು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಹರ್ ಘರ್ ತಿರಂಗ ಅಭಿಯಾನದ ಅಡಿಯಲ್ಲಿ ಇಂದು ಭಾಗವತ್ ಅವರು ರಾಷ್ಟ್ರಧ್ವಜವನ್ನು ಹಾರಿಸಿದರು.

ನಿನ್ನೆ ಆರ್​ಎಸ್​ಎಸ್​ ಅಧಿಕೃತವಾದ ತನ್ನ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳ ಡಿಪಿಯನ್ನ ತ್ವಿವರ್ಣ ಧ್ವಜ ಇರುವ ಡಿಪಿ ಅಳವಡಿಸಿತ್ತು.

RELATED ARTICLES

Related Articles

TRENDING ARTICLES