Monday, December 23, 2024

ತಮ್ಮ ಮನೆಯಲ್ಲಿ ‌ರಾಷ್ಟ್ರ ಧ್ವಜ ಪ್ರದರ್ಶಿಸಿದ ಹೆಚ್​.ಡಿ ದೇವೇಗೌಡ

ಬೆಂಗಳೂರು: ರಾಷ್ಟ್ರಧ್ವಜವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಅದಕ್ಕೆ ನನ್ನ ಅಚಲ ನಿಷ್ಠೆಯನ್ನು ಪ್ರತಿಜ್ಞೆ ಮಾಡಲು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್​.ಡಿ ದೇವೇಗೌಡ ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಹೆಚ್​ಡಿಡಿ, ಇದು ನಮ್ಮ ಸ್ವಾತಂತ್ರ್ಯದ ದೊಡ್ಡ ಸಂಕೇತವಾಗಿದೆ. ಆಜಾದಿ ಕಾ ಅಮೃತಮಹೋತ್ಸವದ ಸಂದರ್ಭದಲ್ಲಿ ನಾನು ಭಾರತೀಯರಾದ ನಾವೆಲ್ಲರೂ ತಿರಂಗದ ಅಡಿಯಲ್ಲಿ ಸಾಮರಸ್ಯದಿಂದ ಬದುಕುವ ಮಹಾನ್ ಆದರ್ಶವನ್ನು ಈಡೇರಿಸಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಅಜಾದಿ ಕಾ ಅಮೃತಮಹೋತ್ಸವ ಹಿನ್ನಲೆ ಪಿಎಂ ನರೇಂದ್ರ ಮೋದಿ ಅವರು ತಮ್ಮ ತಮ್ಮ ಮನೆಯಲ್ಲಿ ‌ರಾಷ್ಟ್ರ ಧ್ವಜ ಪ್ರದರ್ಶನ ಮಾಡಬೇಕೆಂದು ಕರೆ ನೀಡಿದ್ದರು. ಇದಕ್ಕೆ ರಾಷ್ಟ್ರವ್ಯಾಪ್ತಿ ಸ್ಪಂದನೆ ವ್ಯಕ್ತವಾಗಿದ್ದು ಅದರಂತೆ ದೇವೇಗೌಡ ಅವರು ರಾಷ್ಟ್ರ ಧ್ವಜ ‌ಪ್ರದರ್ಶಿಸಿದ್ದಾರೆ.

RELATED ARTICLES

Related Articles

TRENDING ARTICLES