Saturday, December 28, 2024

ಕೇಂದ್ರ ಸಚಿವ Vs ಬಿಜೆಪಿ ಶಾಸಕ ಬೆಂಬಲಿಗರ ಗಲಾಟೆ: ಖೂಬಾ ಕಾರು ಜಖಂ.!

ಬೀದರ್ : ಹರ್ ಘರ್ ತಿರಂಗಾ ಕಾರ್ ರ‍್ಯಾಲಿ ವೇಳೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಶಾಸಕ ಶರಣು ಸಲಗರ ಮಧ್ಯ ಬೀದಿ ರಂಪಾಟ ಬಸವಕಲ್ಯಾಣದಲ್ಲಿ ನಡೆದಿದೆ.

ಕೇಂದ್ರ ಸಚಿವ ಭಗವಂತ ಖೂಬಾ ತಿರಂಗಾ ಕಾರ್ ರ‍್ಯಾಲಿ ವೇಳೆ ಈ ಗಲಾಟೆ ನಡೆದಿದ್ದು, ಸಚಿವರು ಶಾಸಕ ಶರಣು ಸಲಗಾರ ಅವರನ್ನ ಕಡೆಗಣಿಸಿದಕ್ಕೆ ಸಲಗರ ಹಾಗೂ ಖೂಬಾ ಬೆಂಬಲಿಗರ ಮಧ್ಯ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೈ- ಕೈ ಮಿಲಾಯಿಸುವ ಹಂತಕ್ಕೆ ಈ ಗಲಾಟೆ ತಲುಪಿತು.

ಜಿಲ್ಲೆಯ ಔರಾದ್ ತಾಲೂಕಿನ ಸಂಗಮ್ ನಿಂದ ಎಲ್ಲಾ ತಾಲೂಕುಗಳಿಂದ ಹೊರಟು ಬಸವಕಲ್ಯಾಣಕ್ಕೆ ತಲುಪಿದ್ದ ಯಾತ್ರೆ
ಬಸವಕಲ್ಯಾಣ ರ್ಯಾಲಿ ವೇಳೆ ಸ್ಥಳೀಯ ಶಾಸಕ ಶರಣು ಸಲಗರಗೆ ಕೇಂದ್ರ ಸಚಿವರಿಂದ ಕಡೆಣೆಗಣಿಸಿರುವ ಆರೋಪ ಹಿನ್ನೆಲೆ
ಶಾಸಕ ಸಲಗರ- ಭಗವಂತ ಖೂಬಾ ನಡುವೆ ಕೂಡ ಮಾತಿನ ಚಕಮಕಿ ನಡೆದಿದೆ ಎರಡೂ ಕಡೆಯ ಬೆಂಬಲಿಗರು ಪರಸ್ಪರ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಈ ವೇಳೆ ಸೆಂಟ್ರಲ್ ಮಿನಿಸ್ಟರ್​ ಭಗವಂತ ಖೂಬಾ ಅವರ ವಾಹನವನ್ನ ಶರಣು ಸಲಗಾರ ಬೆಂಬಲಿಗರು ಜಖಂಗೊಳಿಸಿದರು.

 

RELATED ARTICLES

Related Articles

TRENDING ARTICLES