Wednesday, January 22, 2025

ತ್ರಿಕೋನ ಪ್ರೇಮ ಕತೆ, ಇಬ್ಬರಿಗೆ ಚಾಕು ಇರಿದ ಪಾಗಲ್‌ ಪ್ರೇಮಿ.!

ಮಡಿಕೇರಿ: ತ್ರಿಕೋನ ಪ್ರೇಮ ಕತೆ ಹಿನ್ನಲೆಯಲ್ಲಿ ಪಾಗಲ್‌ ಪ್ರೇಮಿಯೊಬ್ಬ ಇಬ್ಬರಿಗೆ ಚಾಕು ಇರಿದ ಘಟನೆ ಕುಶಾಲನಗರ ತಾಲೂಕಿನ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದವರು ಕುಶಾಲನಗರದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದ್ದು, ಸದ್ಯ ಸ್ಥಳೀಯ ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಇಬ್ಬರು ಪ್ರೇಮಿಗಳು ಪ್ರವಾಸಿತಾಣ ಕಾವೇರಿ ನಿಸರ್ಗಧಾಮ ನೋಡಲು ಬಂದಿದ್ದರು. ಈ ವೇಳೆ ಇಬ್ಬರು ಒಟ್ಟಿಗೆ ಇರೋದನ್ನ ನೋಡಿ ಪಾಗಲ್ ಪ್ರೇಮಿ ಚಾಕು ಇರಿದ್ದಾನೆ.

ಸ್ಥಳೀಯರ ಸಹಾಯದಿಂದ ಆರೋಪಿಯನ್ನು ಸೆರೆಹಿಡಿದು, ಪೋಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕುಶಾಲನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES