Saturday, December 28, 2024

ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನ ಎಳೆದೊಯ್ದ ಮೊಸಳೆ

ಕಾರವಾರ: ವ್ಯಕ್ತಿಯೊಬ್ಬನನ್ನು ಮೊಸಳೆ ಎಳೆದೊಯ್ದ ಘಟನೆ ದಾಂಡೇಲಿಯ ವಿನಾಯಕ್ ನಗರದ ಅಲೈಡ್ ಬಳಿ ನಡೆದಿದೆ.

ವಿನಾಯಕ್ ನಗರದ ಅಲೈಡ್ ಬಳಿ ಮೀನು ಹಿಡಿಯಲು ಸುರೇಶ್ ವಸಂತ್ ತೇಲಿ(44) ತೆರಳಿದ್ದ. ಈ ವೇಳೆ ಮೊಸಳೆ ಸುರೇಶ್​ ನನ್ನ ನೀರಿನಲ್ಲಿ ಎಳೆದುಕೊಂಡು ಹೋಗಿದೆ.

ನದಿ ದಂಡೆಯಲ್ಲಿ ಮೀನು ಹಿಡಿಯುತ್ತಿದ್ದ ಇದ್ದಕ್ಕಿದ್ದ ಹಾಗೆ ಮೊಸಳೆ ಬಂದು ಹಿಡಿದು ಎಳೆದೊಯ್ದಿದೆ. ಈಗ ರೆಸ್ಕ್ಯೂ ತಂಡ ಮತ್ತು ಪೊಲೀಸರಿಂದ ಕಾಣೆಯಾದ ವ್ಯಕ್ತಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ.ಎಲ್ ಗಣೇಶ್ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES