Tuesday, December 24, 2024

ಸಿದ್ದರಾಮಯ್ಯ ಕಂಡ್ರೆ ಕಾಂಗ್ರೆಸ್​​​ಗೆ ಭಯ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಡರೆ ಕಾಂಗ್ರೆಸ್​​ಗೆ ಭಯ ಶುರುವಾಗಿದೆ. ಅವರನ್ನ ಮುಟ್ಟಿದ್ರೆ ಭಯ ಶುರುವಾಗುತ್ತದೆ ಅದಕ್ಕೆ ವ್ಯಕ್ತಿ ಪೂಜೆಗೆ ಶರಣಾಗಿದ್ದಾರೆ ಎಂದು ಸಿದ್ದು ವಿರುದ್ಧ ಸಿ. ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್​​ನಲ್ಲಿ ಒಡಕು ಹೆಚ್ಚಾಗುತ್ತಿದೆ. ಸಿದ್ದರಾಮೋತ್ಸವ,ಶಿವಕುಮಾರೋತ್ಸವ ನಡೆಯುತ್ತಿದೆ. ಅವರ ಪಕ್ಷದಲ್ಲಿ ಏನು ಬೇಕಾದ್ರೂ ಮಾಡಲಿ. ನಾವು ಬಹಳ ವರ್ಷದಿಂದ ಕಾಂಗ್ರೆಸ್ ಗಮನಿಸುತ್ತಿದ್ದೇನೆ. ಎಸ್.ಬಂಗಾರಪ್ಪ 92 ರಲ್ಲಿ ಸಿಎಂ ಆಗಿದ್ದರು. ಅದರೆ, ಕಾಂಗ್ರೆಸ್ ಹೈಕಮಾಂಡ್ ಮುಟ್ಟಲು ಯಾರಿಂದಲೂ ಸಾಧ್ಯವಿರಲಿಲ್ಲ. ಅವರು ಸಿಎಂ ಆಗಿ ಎರಡು ವರ್ಷ ಪೂರೈಸ್ತಾರೆ. ಒಂದು ಉತ್ಸವವನ್ನ ಮಾಡ್ತಾರೆ ಆಗ ಕಾಂಗ್ರೆಸ್ ಉತ್ಸವ ಆಗಲ್ಲ, ಬಂಗಾರಪ್ಪ ಉತ್ಸವ ಆಗುತ್ತೆ. ಆಗ ಬಂಗಾರಪ್ಪನವರಿಗೆ ಕಿರುಕುಳ ನೀಡ್ತಾರೆ. ಉತ್ಸವ ನಡೆದರೆ ಗಾಂಧಿ ಕುಟುಂಬಕ್ಕೆ ಮಾತ್ರ ಇರಬೇಕು. ಬೇರೆಯವರ ಉತ್ಸವಕ್ಕೆ ಅಲ್ಲಿ ಅವಕಾಶವಿಲ್ಲ. ವಿ.ಪಿ.ಸಿಂಗ್ ಅವಧಿಯಲ್ಲೂ ಆದೇ ಆಗಿತ್ತು ಎಂದು ತಿಳಿಸಿದರು.

ಇನ್ನು ಕಾಂಗ್ರೆಸ್ ಇವತ್ತು ಒಬ್ಬ ವ್ಯಕ್ತಿಯನ್ನ ಇಟ್ಟುಕೊಂಡಿದೆ. ಅವರನ್ನ ಮೆರೆಸುವ ಕೆಲಸ ಮಾಡ್ತಿದೆ. ಸಿದ್ದರಾಮಯ್ಯ ಅವರ ಮುಂದೆ ಹೈಕಮಾಂಡ್ ಶರಣಾಗಿದೆ. ತನ್ನ ಶಕ್ತಿಯನ್ನ ಕಾಂಗ್ರೆಸ್ ಕಳೆದುಕೊಂಡು ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು.

RELATED ARTICLES

Related Articles

TRENDING ARTICLES