ಕಲಬುರಗಿ : ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ತಾಯಿ ಅಧ್ಯಕ್ಷೆ ಆದ್ರೂ ಮಗನೇ ಆಡಳಿತ ನಡೆಸುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ದಿನಾಲು ಗ್ರಾಮ ಪಂಚಾಯತಿಯ ಅಧ್ಯಕ್ಷೆಯ ಕೊಠಡಿಯಲ್ಲಿ ಕೂಳಿತು ಮಗ ಅಧಿಕಾರ ನಿರ್ವಹಿಸುತ್ತಿರುವುದು ಗ್ರಾಮದ ಜನರಿಗೆ ಕಣ್ಣು ಕೆಂಪಗಾಗುವಂತೆ ಮಾಡಿದೆ. ಸಂಪೂರ್ಣವಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿವೆ.
ದೋರನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 35 ಜನ ಸದಸ್ಯರು ಇದ್ದಾರೆ. ನಿಂಗಮ್ಮ ಶಹಾಪುರ ಅಧ್ಯಕ್ಷರಿದ್ದಾರೆ. ಇದರಿಂದ ಸಮಾಜಮುಖಿ ಆಡಳಿತ ನೀಡಲು ಆಗುವುದಿಲ್ಲ ಎಂದು ಅವರ ಮಗನೇ ಅಧ್ಯಕ್ಷೆ ಕೊಠಡಿಯ ಕುರ್ಚಿ ಮೇಲೆ ಕುಂತು ಆಡಳಿತ ಮಾಡುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳು ವೈರಲ್ ಆಗುತ್ತಿವೆ.
ಅಭಿವೃದ್ಧಿ ಕಾರ್ಯಗಳು, ಮನೆಗಳ ಹಂಚಿಕೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಏನಾದ್ರೂ ಕೆಲಸ ಕಾರ್ಯಗಳು ಆಗಬೇಕು ಅಂದ್ರೇ ಗ್ರಾ.ಪಂ ಅಧ್ಯಕ್ಷೆ ಮಗನೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲದೇ ಗ್ರಾ.ಪಂನಲ್ಲಿರುವ ಕೆಳ ಮಟ್ಟದ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸೆಗುತ್ತಾರೆಂದು ಸಾರ್ವಜನಿಕರ ಆರೋಪವಾಗಿದೆ. ಇದು ಪ್ರಜಾಪ್ರಭುತ್ವ ಅಣಕ ಎಂಬ ಟೀಕೆಗಳು ಕೇಳಿ ಬಂದಿವೆ.
ಗ್ರಾಪಂ ಅಧ್ಯಕ್ಷೆಗೆ ಸಹಿ ಮಾಡಲು ಮಾತ್ರ ಬರುತ್ತೇ, ಅದೇ ಮಾದರಿಯಲ್ಲಿ ಮಗ ಸಹಿ ಮಾಡುತ್ತಾರೆ. ಚೆಕ್ ಗಳಿಗೂ ಸಹಿ ಮಗನೇ ಮಾಡುತ್ತಾರೆ.
ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಮಹಿಳೆಯರು ಬರಲಿ ಎಂಬ ಕಾರಣಕ್ಕೆ ಸರ್ಕಾರ ಮಹಿಳೆಯರಿಗೆ ಶೇಕಡ 50% ರಷ್ಟು ಮೀಸಲಾತಿ ನೀಡಿದೆ. ಆದ್ರೇ ಪುರುಷರು ಮಾತ್ರ ಸ್ವತಂತ್ರವಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ ಎಂಬ ಆರೋಪ ಪ್ರಬಲವಾಗಿದೆ.
ಮಹಿಳೆಯರ ಹೆಸರಿನಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮಕೈಗೊಂಡು, ನಿಂಗಮ್ಮ ಶಹಾಪುರ ಅವರನ್ನ ಅಧ್ಯಕ್ಷೆಯ ಸ್ಥಾನದಿಂದ ವಜಾಗೊಳಿಸಬೇಕೆಂದು ಗ್ರಾಮದ ಪ್ರಜ್ಞಾನವಂತ ನಾಗರೀಕರ ಗಂಭೀರ ಆರೋಪವಾಗಿದೆ.