Monday, December 23, 2024

ವಿಕ್ರಾಂತ್ ರೋಣನ ಗತ್ತು.. ಕುಚಿಕು ಟೀಮ್ಸ್ ಕರಾಮತ್ತು

ಭಾರತೀಯ ಚಿತ್ರರಂಗದಲ್ಲಿ ನಮ್ಮ ಕನ್ನಡಿಗರ ನ್ಯೂ ಸ್ಟ್ಯಾಂಡರ್ಡ್ಸ್​ನ ಸೆಟ್ ಮಾಡಲು ಹೊರಟಿದ್ದಾನೆ ವಿಕ್ರಾಂತ್ ರೋಣ. ಯೆಸ್.. ಸ್ಯಾಂಡಲ್​ವುಡ್ ತಾರೆಯರಿಂದ ಲಾಂಚ್ ಆದ ರೋಣದ ತ್ರೀಡಿ ಟ್ರೈಲರ್ ಝಲಕ್ ಹೇಗಿದೆ ಅನ್ನೋದ್ರ ಜೊತೆ ಶೆಟ್ರು- ಭಟ್ರ ಟೀಂ ಹಾಗೂ ಶಿವಣ್ಣ- ಕ್ರೇಜಿಸ್ಟಾರ್ ಏನು ಹೇಳಿದ್ರು ಅನ್ನೋದ್ರ ಕಂಪ್ಲೀಟ್ ಝಲಕ್ ನಿಮ್ಮ ಮುಂದೆ.

ವಿಕ್ರಾಂತ್ ರೋಣನ ಗತ್ತು.. ಕುಚಿಕು ಟೀಮ್ಸ್ ಕರಾಮತ್ತು

ಪವರ್​ನಲ್ಲಿ ಪ್ರೀ ಟ್ರೈಲರ್ ಲಾಂಚ್ ಇವೆಂಟ್ ರೌಂಡಪ್

ಸುದೀಪ್​ಗೆ ಶಿವಣ್ಣ- ರವಿ ಜೊತೆ ಶೆಟ್ರು- ಭಟ್ರು ಸಾಥ್

ಸ್ಯಾಂಡಲ್​ವುಡ್ ಮಹಾ ಸಂಗಮಕ್ಕೆ ಸಾಕ್ಷಿ ಆದ VR

ಜೂನ್ 23ರ ಸಂಜೆ 5.02ಕ್ಕೆ ಮೋಸ್ಟ್ ಎಕ್ಸ್​ಪೆಕ್ಟೆಡ್ ಪ್ಯಾನ್ ಇಂಡಿಯಾ ಮೂವಿ ವಿಕ್ರಾಂತ್ ರೋಣ ಟ್ರೈಲರ್ ಲಅಂಚ್ ಆಗಲಿದೆ. ಆದ್ರೆ ಒಂದು ದಿನ ಮೊದ್ಲೇ ಕನ್ನಡದಲ್ಲಿ ತ್ರೀಡಿ ಟ್ರೈಲರ್​ನ ಲಾಂಚ್ ಮಾಡಿ ಅಚ್ಚರಿ ಮೂಡಿಸಿದ್ರು ಕಿಚ್ಚ ಸುದೀಪ್ ಅಂಡ್ ಟೀಂ. ಇದು ಆಲ್ ಇಂಡಿಯಾ ಕಟೌಟ್ ಕಿಚ್ಚ, ವರ್ಲ್ಡ್​ ಕಟೌಟ್ ಆಗಲಿರೋ ಸಿನಿಮಾ ಕೂಡ ಹೌದು. ಕಾರಣ ಚಿತ್ರದ ಮೇಕಿಂಗ್ ಮಸಲತ್ತು ಹಾಗೂ ಕಥೆಯಲ್ಲಿರೋ ಗಟ್ಟಿತನ ಮತ್ತು ಪಾತ್ರಗಳು.

ಅನೂಪ್ ಭಂಡಾರಿ ನಿರ್ದೇಶನದ ಹಾಗೂ ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಸ್ಟೋರಿಲೈನ್ ಪಿಕ್ ಮಾಡಿ ಕೊಟ್ಟಿದ್ದೇ ಕಿಚ್ಚನ ಅರ್ಧಾಂಗಿ ಪ್ರಿಯಾ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಬಾಲಿವುಡ್​ನ ಜಾಕ್ವೆಲಿನ್ ಫಾರ್ನಾಂಡಿಸ್ ಕೂಡ ಈ ಚಿತ್ರದ ರಕ್ಕಮ್ಮನಾಗಿ ಮಿಂಚಿದ್ದು, ಟ್ರೈಲರ್ ಲಾಂಚ್ ಇವೆಂಟ್​ನಲ್ಲಿ ನಮ್ಮ ಬೆಂಗಳೂರಲ್ಲಿ ಎಲ್ಲರ ಹುಬ್ಬೇರಿಸಿದ್ರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರೀ ನಟ, ನಿರ್ದೇಶಕ, ನಿರ್ಮಾಪಕನಷ್ಟೇ ಅಲ್ಲ. ಮ್ಯಾನ್ ಆಫ್ ಮಿಲಿಯನ್ ಹಾರ್ಟ್ಸ್. ಹೌದು.. ಅದಕ್ಕೆ ವಿಕ್ರಾಂತ್ ರೋಣ ಟ್ರೈಲರ್ ಲಾಂಚ್ ಇವೆಂಟ್ ಬೆಸ್ಟ್ ಎಕ್ಸಾಂಪಲ್. ಶಿವರಾಜ್​ಕುಮಾರ್, ರಮೇಶ್ ಅರವಿಂದ್, ರವಿಚಂದ್ರನ್ ಟ್ರೈಲರ್​ನ ಲಾಂಚ್ ಮಾಡಿದ್ದಲ್ಲದೆ, ಕಿಚ್ಚನನ್ನ ಹಾಡಿ ಹೊಗಳಿತು.

ರಕ್ಷಿತ್- ರಿಷಭ್- ರಾಜ್ ಬಿ ಶೆಟ್ಟಿ ಸೇರಿದಂತೆ ಶೆಟ್ರ ಗ್ಯಾಂಗ್ ಜೊತೆ ವಿಕಟಕವಿ ಯೋಗರಾಜ್ ಭಟ್ ಕೂಡ ಬಂದು ಟೀಂ ವಿಕ್ರಾಂತ್ ರೋಣಗೆ ಶುಭ ಹಾರೈಸಿದ್ದು ಇಂಟರೆಸ್ಟಿಂಗ್. ಅದ್ರಲ್ಲೂ ಸಿನಿಮಾ ಕಂಟೆಂಟ್ ಹಾಗೂ ಮೇಕಿಂಗ್ ಜೊತೆ ಕಿಚ್ಚನ ಮೇಲೆ ಇವ್ರೆಲ್ಲಾ ತೋರಿದ ಅಭಿಮಾನ ಮುಗಿಲು ಮುಟ್ಟಿತು.

ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಿರ್ಮಾಪಕ ಜಾಕ್ ಮಂಜು ಕೂಡ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡ್ರು. ಅನಾರೋಗ್ಯದ ಸಂದರ್ಭದಲ್ಲೂ ಜಾಕ್ ಮಂಜು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಕಿಚ್ಚನ ಖುಷಿಯನ್ನ ದುಪ್ಪಟ್ಟು ಮಾಡಿತು.

ವಿಶೇಷ ಅಂದ್ರೆ ಒರಾಯನ್ ಮಾಲ್​ನ ಪಿವಿಆರ್​ನಲ್ಲಿ ನಡೆದ ಈ ಇವೆಂಟ್ ಚಿತ್ರರಂಗದಲ್ಲಿರೋ ಒಗ್ಗಟ್ಟು ಹಾಗೂ ಕ್ರಿಯಾಶೀಲತೆಯ ತಾಕತ್ತನ್ನ ಪ್ರದರ್ಶಿಸಿತು. ಕಾರ್ಯಕ್ರಮದ ನಂತ್ರ ಮಾಲ್​ನಲ್ಲಿ ನೆರೆದಿದ್ದ ಸಾವಿರಾರು ಮಂದಿ ಕನ್ನಡ ಕಲಾಭಿಮಾನಿಗಳನ್ನ ಕಿಚ್ಚ ಹಾಗೂ ಜಾಕ್ ಸ್ಟೆಪ್ ಹಾಕೋ ಮೂಲಕ ರಂಜಿಸಿದ್ರು. ಅದೂ ಫ್ಯಾನ್ಸ್ ಜೊತೆಗೇನೇ ಸ್ಟೆಪ್ ಹಾಕಿದ್ದು ಸಿಕ್ಕಾಪಟ್ಟೆ ಶಿಳ್ಳೆ- ಚಪ್ಪಾಳೆ ಗಿಟ್ಟಿಸಿತು.

ಇನ್ನು ವೇದಿಕೆ ಮೇಲೆ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಶಿವಣ್ಣ ಹಾಕಿದ ಹುಕ್ ಸ್ಟೆಪ್, ಹಾಗೂ ಎಲ್ಲಾ ಸ್ಟಾರ್ಸ್​ ಸೊಂಟ ಬಳುಕಿಸಿದ ಪರಿ ನಿಜಕ್ಕೂ ವ್ಹಾವ್ ಫೀಲ್ ನೀಡಿತು. ಅದೇನೇ ಇರಲಿ, ಇದೇ ಜುಲೈ 28ಕ್ಕೆ ಸಿನಿಮಾ ವರ್ಲ್ಡ್​ ವೈಡ್ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್​ನಲ್ಲಿ ತೆರೆಗಪ್ಪಳಿಸಲಿದೆ. 2ಡಿ ಜೊತೆ ತ್ರೀಡಿಯಲ್ಲೂ ಸಿನಿಮಾ ತಯಾರಾಗ್ತಿದ್ದು, ಕೆಜಿಎಫ್ ನಂತ್ರ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ರೋಣ ರಂಗೇರಲಿದ್ದಾನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES