Sunday, January 19, 2025

2 ಕುಟುಂಬಗಳ ಮಾರಾಮಾರಿ: ನಿರ್ಮಾಪಕ ಮತ್ತು ನಟ ಸೇರಿ ಹತ್ತು ಜನ ಅಂದರ್

ಕಲಬುರಗಿ:  ಚಿತ್ತಾಪುರ ತಾಲ್ಲುಕಿನ ಮೂಡಬೂಳ ಗ್ರಾಮದ ವಿಶ್ವನಾಥ್ ಸಂಗಾವಿ ಕೊಲೆ ಪ್ರಕರಣ ಸಂಬಂಧ ಚಿತ್ತಾಪುರ ಪೊಲಿಸರು ಸ್ಯಾಂಡಲ್ ವುಡ್ ನಿರ್ಮಾಪಕ ಮತ್ತು ನಾಯಕ ನಟ ಸೇರಿ ಹತ್ತು ಜನರನ್ನ ಅರೆಸ್ಟ್​​ ಮಾಡಿದ್ದಾರೆ.

ಮೂಡಬೂಳ ಗ್ರಾಮದ ಸಣ್ಣೂರಕರ್ ಕುಟುಂಬದ ಯಜಮಾನ ಮತ್ತು ಮಾಮು ಟೀ ಅಂಗಡಿ ಸಿನಿಮಾದ ನಿರ್ಮಾಪಕ ಶಿವಮುದ್ರಪ್ಪ ಸಣ್ಣೂರಕರ್ , ಮಾಮು ಟೀ ಅಂಗಡಿ ಸಿನಿಮಾದ ನಾಯಕ ಮತ್ತು ಶಿವಮುದ್ರಪ್ಪನ ಮಗ ಅಭಿಷೇಕ್ ಸೇರಿ ಸಣ್ಣೂರಕರ್ ಕುಟುಂಬದ ಭಾಗಿನಾಥ್ , ಭದ್ರಪ್ಪ , ಅಪ್ಪಣ್ನ , ರಾಮು , ಉಮೇಶ್ , ನಾಗರಾಜ್ , ಧನರಾಜ್ ಬಸವರಾಜ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಸಣ್ಣೂರಕರ್ ಕುಟುಂಬದ ಏಳು ಜನರು ತಲೆ ಮರೆಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರವ ಏಳು ಜನರಿಗಾಗಿ ಕೂಡ ಪೊಲೀಸರು ಹುಟುಕಾಟ ನಡೆಸಿದ್ದಾರೆ. ಸಂಗಾವಿ ಮತ್ತು ಸಣ್ಣುರಕರ್ ಕುಟುಂಗಳು ಚಿತ್ತಾಪುರ ತಾಲ್ಲುಕಿನ ಮೂಡಬೂಳ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸಿಕೊಂಡು ಬರ್ತಿದ್ದಾರೆ.

ಎರಡು ಕುಟುಂಬಗಳು ಕೂಡ ಆರ್ಥಿಕವಾಗಿ , ರಾಜಕೀಯವಾಗಿ ಬಲಾಢ್ಯ ಕುಟುಂಬಗಳೆ ಆಗಿದ್ದಾವೆ. ಆದ್ರೆ ಈ ಎರಡು ಕುಟುಂಬಗಳ ಮಧ್ಯೆ ಕಳೆದ 30 ವರ್ಷಗಳಿಂದ ಗಲಾಟೆ ನಡೆದುಕೊಂಡೆ ಬರ್ತಾ ಇತ್ತು. ನಿನ್ನೆ ಕೂಡ ಸಣ್ಣ ಡ್ರೈನೇಜ್ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ ಸಂಗಾವಿ ಕುಟುಂಬದವರನ್ನ ಊರೆಲ್ಲಾ ಅಟ್ಟಾಡಿಸಿಕೊಂಡು ಹೊಡೆದು ಕೊನೆಗೆ ವಿಶ್ವನಾಥ್ ನನ್ನ ಬರ್ಬರವಾಗಿ ಕೊಲೆ ಮಾಡಿದ್ರು. ಆದ್ರೆ ಕೊಲೆ ಆರೋಪಿಗಳನ್ನ ಹೆಡೆ ಮುರಿ ಕಟ್ಟುವಲ್ಲಿ ಪೊಲಿಸರು ಅಂದರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Related Articles

TRENDING ARTICLES