Wednesday, January 22, 2025

ಪಿಎಸ್ಐ ಅಕ್ರಮದಲ್ಲಿ ಮತ್ತಿಬ್ಬರ ಬಂಧನ

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಅಫಜಲಪುರ ತಾಲ್ಲೂಕಿನ ಕರ್ಜಗಿ ಗ್ರಾಮದ ಮಹೇಶ್ ಹಿರೋಹಳ್ಳಿ , ಸೈಫನ್ ಜಮಾದಾರ್ ಬಂಧಿತರು ಎಂದು ತಿಳಿದು ಬಂದಿದೆ. ಬಂಧಿತ ಸೈಫನ್ ಸಹೋದರ ಇಸ್ಮಾಯಿಲ್ ಖಾದರ್ ವಿರುದ್ದ ಕೂಡ ದೂರು ದಾಖಲಾಗಿದ್ದು, ಈತ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಪಾಸ್ ಆಗಿದ್ದ. ಈ ಅಕ್ರಮಕ್ಕೆ ಮಹೇಶ್ ಸೈಫನ್ ಸೇರಿ ಹಲವರು ಸಾಥ್‌ ನೀಡಿದ್ದರು ಎನ್ನಲಾಗಿದೆ.

ಇನ್ನು ಮಹೇಶ್ ಮತ್ತು ಸೈಫನ್ ಇಬ್ಬರು ಆರ್ ಡಿ ಪಾಟೀಲ್ ಆಪ್ತರಾಗಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದ ಇಸ್ಮಾಯಿಲ್ ಖಾದರ್ ತೆಲೆಮರೆಸಿಕೊಂಡಿದ್ದು. ಈತ ಸೇರಿ ಐವರಿಗಾಗಿ ಸಿಐಡಿ ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಪಿಎಸ್ಐ ಇಸ್ಮಾಯಿಲ್ ಖಾದರ್ ಸೇರಿ ಐದು ಜನರ ವಿರುದ್ದ ಮತ್ತೊಂದು ಎಫ್ ಐ ಆರ್ ದಾಖಲು. ಸದ್ಯ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES