Tuesday, January 7, 2025

ಹುಚ್ಚು ಹಿಡಿಸೋ ಲೂಡೋ ಗೇಮ್‌ಗೆ ಬಾಲಕ ಬಲಿ

ಕಲಬುರಗಿ: ಆ ಬಾಲಕ ಆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಕಾಲೇಜು ಮೆಟ್ಟಿಲು ಹತ್ತೋಕೆ ಸಿದ್ದತೆ ಮಾಡಿಕೊಂಡಿದ್ದ.. ಆದರೆ, ಅದೇ ಗ್ರಾಮದ ಯುವಕನ ಜೊತೆ ಲೂಡೋ ಗೇಮ್ ಆಡುವ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಜಗಳ ನಿಂತಿಲ್ಲ ಬದಲಾಗಿ ಬೇರೆ ರೂಪವನ್ನೆ ತಾಳಿದೆ.

ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಬಾಲಕ. ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.  ಈ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ. ಬಾಲಕನ ಹೆಸರು ಶಾಮರಾಯ ಪರೀಟ್ ( 16  ). ಇತ್ತೀಚೆಗಷ್ಟೆ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ. ಆದರೆ, ಅದೇ ಗ್ರಾಮದ ಸಚಿನ್ ಕಿರಸಾವಳಗಿ ಎಂಬಾತನ ಜೊತೆ ಲೂಡೋ ಗೇಮ್ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಕಳೆದ ರಾತ್ರಿ ಸಚಿನ್ ಕಂಠಪೂರ್ತಿ ಕುಡಿದು ಬಂದು ಶಾಮರಾಯ ಮನೆ ಹತ್ರ ಬಂದು ಅವ್ಯಾಚ್ಯ ಶಬ್ಧಗಳಿಂದ ಬೈಯೋಕೆ ಶುರು ಮಾಡಿದ್ದಾನೆ.

ಶಾಮರಾಯ ಸಹೋದರ ಧರ್ಮರಾಜ್ ಬಂದು ಯಾಕ್ರಪ್ಪ ಬೈಯ್ಕೊತ್ತಾಯಿದೀರ ಅಂತಾ ಬುದ್ಧಿವಾದ ಹೇಳಿ ಇಬ್ಬರಿಗೂ ಕಪಾಳಕ್ಕೆ ಹೊಡೆದು ಹೋಗಿದ್ದಾನೆ. ಇಷ್ಟಕ್ಕೆ ಕುಪಿತಗೊಂಡ ಸಚಿನ್ ಕಿರಸಾವಳಗಿ, ಧರ್ಮರಾಜ್‌ನನ್ನು ಒಂದು ಗತಿ ಕಾಣಿಸಬೇಕೆಂದು ಮನೆಗೆ ತೆರಳಿ ಚಾಕು ತಂದಿದ್ದಾನೆ. ಈ ವೇಳೆ ಸ್ಥಳದಲ್ಲಿ ಧರ್ಮರಾಜ್ ಇರದೇ ಇದ್ದಿದ್ದಕ್ಕೆ ಶಾಮರಾಯ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.

ಇನ್ನೂ ಕೊಲೆಯಾದ ಶಾಮರಾಯ ಕೂಡ ಬಹುತೇಕ ಸಮಯ ಮೊಬೈಲ್‌ನಲ್ಲೆ ಕಳೆಯುತ್ತಿದ್ದ ಎನ್ನಲಾಗಿದೆ. ಅತ್ತ ಸಚಿನ್ ಕೂಡ ಟಿಕ್‌ಟಾಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡೋಕೆ ಕ್ರಿಯೆಟಿವ್ ವಿಡಿಯೋಗಳನ್ನ ಮಾಡೋ ಹವ್ಯಾಸ ಬೆಳೆಸಿಕೊಂಡಿದ್ದ. ಸದ್ಯ ಕೊಲೆ ಮಾಡಿರುವ ಸಚಿನ್ ಕಿರಸಾವಳಗಿಯನ್ನ ಅಫಜಲಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಕಾಲೇಜು ಮೆಟ್ಟಿಲು ಏರಬೇಕಿದ್ದ ಶಾಮರಾಯ ಮಸಣಕ್ಕೆ ಸೇರಿದ್ರೆ ಇತ್ತ ಕೊಲೆ ಮಾಡಿದ ಸಚಿನ್ ಶ್ರೀ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದು ಮಾತ್ರ ವಿಪರ್ಯಾಸವೇ ಸರಿ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES