Tuesday, January 7, 2025

ಊಟ ಬೇಡಿದ ಮುಗ್ದ ಮಗುವಿಗೆ ಕೆಂಡದ ಕಿಡಿಯಿಂದ ಕೈಸುಟ್ಟ ಮಲತಾಯಿ

ಕಲಬುರಗಿ : ಊಟ ಬೇಡಿದ ಮುಗ್ದ ಮಗುವಿಗೆ ಕೆಂಡದ ಕಿಡಿಯಿಂದ ಕೈಸುಟ್ಟ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ನಡೆದಿದೆ.

ನಾಲ್ಕು ವರ್ಷದ ಮಗುವಿಗೆ ಕೆಂಡದಿಂದ ಕೈಸುಟ್ಟು ಹಗ್ಗದಿಂದ ಮಂಚಕ್ಕೆ ಕಟ್ಟಿದ್ದ ತಾಯಿ ಎರಡು ದಿನಗಳಿಂದ ಮಗು ಆಚೆ ಬಾರದಿದ್ದಕ್ಕೆ ಸ್ಥಳೀಯರು ವಿಚಾರಣೆ ಮಾಡಿದ್ದಾರೆ. ಮನೆಗೆ ಹೋಗಿ ಮಗುವನ್ನ ಬಿಡಿಸಿಕೊಂಡು ಬಂದ ಸ್ಥಳೀಯರು. ತಾಯಿಗೆ ತೀವ್ರ ತರಾಟೆ, ನಾನು ಸುಡುವುದು ಹಿಗೇ.. ನಿವ್ಯಾರು ಕೇಳೊಕೆ? ಎಂದು ಗಲಾಟೆ ಮಾಡಿದ್ದಾಳೆ.

ಮೊದಲ ಹೆಂಡತಿ ತೀರಿಕೊಂಡಿದ್ದಕ್ಕೆ ಎರಡನೇ ಮದ್ವೆಯಾಗಿದ್ದ ಮಗುವಿನ ತಂದೆ ತಿಪ್ಪಣ್ಣ. ಮಗುವಿಗೆ ಊಟದ ತೊಂದರೆಯಾಗವಾರದೆಂದು ಎರಡನೇ ಮದ್ವೆ ಆಗಿದ್ದರು. ಆದರೆ ಕೆಲ ದಿನಗಳ ನಂತರ ಹೆಂಡ್ತಿ ಮಗುವನ್ನ ಬಿಟ್ಟು ಪುಣೆಗೆ ದುಡಿಯಲು ತೆರಳಿದ್ದ ಮಗುವಿನ ತಂದೆ. ಪತಿ ತೆರಳಿದ ನಂತರ ನಿತ್ಯವೂ ಮಗುವಿಗೆ ಚಿತ್ರಹಿಂಸೆ ಕೊಡಲು ಶುರು ಮಾಡಿದ್ದಾಳೆ. ಮಗುವಿನ ರೋಧನೆ ಕಂಡು ವಾಡಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES