Wednesday, December 25, 2024

ಮೋದಿ ಸರ್ಕಾರಕ್ಕೆ ಬೊಮ್ಮಾಯಿ ಮೆಚ್ಚುಗೆ

ಉಡುಪಿ: ದೇಶದಲ್ಲಿ ನಿತ್ಯ ಅವಮಾನ, ಅಪಮಾನ ಅನುಭವಿಸುವ ಜನ ವರ್ಗಕ್ಕೆ ಆತ್ಮ ಗೌರವದ ಬದುಕನ್ನು ಪ್ರಧಾನಿ‌ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷಗಳಲ್ಲಿ ಒದಗಿಸಿದ್ದು ನವ ಮನ್ವಂತರದ ಸೃಷ್ಟಿ ಜತೆಗೆ ದೇಶಕ್ಕೆ ಅಭಿವೃದ್ಧಿಯ ಹೊಸ ದಿಕ್ಸೂಚಿ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ಮಣಿಪಾಲದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾಧನೆ ಮಾಡಿದವರಷ್ಟೇ ಪ್ರಗತಿ ವರದಿ ಒಪ್ಪಿಸ್ತಾರೆ. ಮೋದಿ ಗುಜರಾತ್ ಸಿಎಂ ಆಗಿದ್ದಾಗ ಜನರಿಗೆ ಪ್ರಗತಿ ವರದಿ ನೀಡುವ ಪರಂಪರೆ ಪ್ರಧಾನಿಯಾಗಿಯೂ ಮುಂದುವರಿಸಿದ್ದಾರೆ. ಆಜಾದಿ ಕಾ‌ ಅಮೃತ ಮಹೋತ್ಸವವು 75ವರ್ಷಗಳ ಆತ್ಮಾವಲೋಕನ, ಸಿಂಹಾವಲೋಕನ ಜತೆಗೆ ಮುಂದಿನ 25 ವರ್ಷಗಳ ಉನ್ನತಿ, ವಿಶ್ವ ಗುರುವಾಗುವ ಗುರಿ ಸಾಧನೆಗೆ ಪೂರಕವಾಗಲಿದೆ. ಯುಪಿಎ, ಎನ್‌ಡಿಎ ಆಡಳಿತದ‌ ಅವಧಿಯ ಅಭಿವೃದ್ಧಿ ತುಲನೆ, ದೇಶದ ಸುರಕ್ಷತೆ, ಸಮೃದ್ಧಿ, ರಾಷ್ಟ್ರ ನಿರ್ಮಾಣ ನಿಟ್ಟಿನಲ್ಲಿ ಚರ್ಚೆಯಾಗಲಿ ಎಂದರು ಹೇಳಿದರು.

RELATED ARTICLES

Related Articles

TRENDING ARTICLES