Tuesday, December 24, 2024

ಮೋದಿ ನಾಯಕತ್ವದಲ್ಲಿ ಮತ ಬರಲ್ಲ ಎಂದು ನಾನು ಹೇಳಿಲ್ಲ : ಸಂಸದ ಸಂಗಣ್ಣ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನನಗೆ ನಂಬಿಕೆ ಇದೆ ಮತ್ತು ಅವರ ನಾಯಕತ್ವವನ್ನ ಜಗತ್ತು ಮೆಚ್ಚಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ.

ಸೋಮವಾರ ಬಿಜೆಪಿ ಜಿಲ್ಲಾ ಘಟಕದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜಾದೂ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಲ್ಲ ಎಂಬ ಹೇಳಿಕೆಯನ್ನು ಕೊಟ್ಟಿದ್ದರು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿದ ಅವರು, ಅಂದು ನಾನು ಮಾತನಾಡಿದ್ದನ್ನ ತಪ್ಪಾಗಿ ಅರ್ಥೈಸಲಾಗಿದೆ, ನಾನು ನಮ್ಮ ಪರ್ಪಾಮ್ಮೆನ್ಸ್ ಸರಿ ಇರಬೇಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ  ನೀಡಿದ್ದಾರೆ.

ಅದುವಲ್ಲದೇ ಅಂದು ನಮ್ಮ ಶಾಸಕರು, ಸಚಿವರು ಭಾಗಿಯಾಗಿದ್ದರು. ಪ್ರತಿ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಿ, ನಮ್ಮ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮೋದಿಯವರ ನಾಯಕತ್ವದಲ್ಲಿ ಮತ ಬರಲ್ಲ ಎಂದು ಹೇಳಿಲ್ಲ, ಇದು ಹಾಸ್ಯಾಸ್ಪದವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ವಾರ್ ನಡೆದ ಸಂದರ್ಭದಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ರಷ್ಯಾ ಉಕ್ರೇನ್​​ ನಡುವೆ ಯುದ್ಧವಾಗಿತ್ತು, ಹೀಗಾಗಿ ಬೆಲೆ ಏರಿಕೆ ಆಗಿದೆ, ನಮ್ಮ ಆಡಳಿತ ವೈಖರಿಯಲ್ಲಿ, ಜನರು ಕಷ್ಟದಲ್ಲಿ ಇದ್ದಾಗ ಅವರ ಪರ ಬರೋದು ನಮ್ಮ ಕರ್ತವ್ಯವಾಗಿದೆ ಮತ್ತು ಬೆಲೆ ಏರಿಕೆ ವಿಚಾರವಾಗಿ ನಮ್ಮ ನಾಯಕರ ಜೊತೆ ಮಾತನಾಡುತ್ತೇನೆ ಎಂದು ಸಂಸದ ಕರಡಿ ಸಂಗಣ್ಣ ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES