ಕಲಬುರಗಿ: ಆರ್ಯ ಈಡಿಗ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ, ಐನೂರು ಕೋಟಿ ಮೀಸಲಿಡುವ ಜತೆಗೆ ಸೇಂಧಿ ಇಳಿಸಲು ಮತ್ತು ಮಾರಾಟಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ಮೇ ಐದರಂದು ಚಿಂಚೋಳಿಯಿಂದ ಕೈಗೊಂಡಿರುವ ಪಾದಯಾತ್ರೆ ಇಂದು ಕಲಬುರಗಿಗೆ ಕಾಲಿಟ್ಟಿದೆ.ನಗರದ ಆರ್‌ಟಿಒ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಜಿಲ್ಲಾಸ್ಪತ್ರೆ, ಎಸ್‌ಟಿಬಿಟಿ ಮೂಲಕ ಜಗತ್ ವೃತ್ತಕ್ಕೆ ಆಗಮಿಸಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಶ್ರೀ ಪ್ರಣವಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ ಸಮಾಜದ ಬೇಡಿಕೆಗಳ ಈಡೇರಿಕೆಗೆ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶ್ರೀ ಪ್ರಣವಾನಂದ ಸ್ವಾಮೀಜಿ, ರಾಜ್ಯದಲ್ಲಿ 25 ಒಳಪಂಗಡಗಳು ಒಳಗೊಂಡು 76 ಲಕ್ಷ ಜನಸಂಖ್ಯೆ ಇರೋ ಆರ್ಯ, ಈಡಿಗಾ, ಬಿಲ್ಲವ ಜನರ ಕುಲಕಸುಬು ಸೇಂಧಿ ಇಳಿಸುವುದು ಮಾರಾಟ ಮಾಡುವುದನ್ನ ಸರ್ಕಾರ ನಿಷೇಧಗೊಳಿಸಿದ್ದನ್ನ ವಾಪಾಸ್ ಪಡೆಯಬೇಕು ಅಂತಾ ಆಗ್ರಹಿಸಿದರು.
ಇನ್ನೂ ಶ್ರೀ ಪ್ರಣವಾನಂದ ಸ್ವಾಮೀಜಿಗಳು ಮೇ ಐದರಂದು ಚಿಂಚೋಳಿ ಪಟ್ಟಣದಿಂದ 100 ಕಿಲೋ ಮೀಟರ್ ಉದ್ದದ ಬೃಹತ್ ಪಾದಯಾತ್ರೆ ಇಂದು ಕಲಬುರಗಿಗೆ ಆಗಮಿಸಿದೆ. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಸಮಾಜದ ಸಾವಿರಾರು ಜನ ಸ್ವಾಮಿಜೀ ನೇತೃತ್ವದಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದರು. ಇನ್ನೂ ಹಿಂದೂಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಹದಿನೆಂಟು ವರ್ಷಗಳ ಹಿಂದೆ ಸೇಂಧಿ ಮಾರಾಟ ಮಾಡುವುದನ್ನ ನಿಷೇಧಿಸಲಾಗಿದ್ದು, ನೆರೆಯ ಆಂದ್ರ ತೆಲಂಗಾಣದಿಂದ ಸೇಂಧಿ ತಂದು ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು. ಇದರ ಜೊತೆಗೆ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಅಭಿವೃದ್ಧಿ ಮಂಡಳಿಗೆ ಐನೂರು ಕೋಟಿ ರೂಪಾಯಿ ನೀಡಬೇಕು ಅಂತಾ ಆಗ್ರಹಿಸಿದರು. ಇನ್ನೂ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಮುಂದೆ ನಮ್ಮ ಶಕ್ತಿ ಏನೆಂಬುದನ್ನ ತೋರಿಸುತ್ತೇವೆ ಅಂತಾ ಹೇಳಿದರು. ಇನ್ನೂ ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ನಮ್ಮದೇ ಸರ್ಕಾರವಿದ್ದು, ನಮ್ಮ ಸಮಾಜದ ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಲೀಕಯ್ಯ ಗುತ್ತಿಗೆದಾರ್ ಹೇಳಿದರು.
ಅದೆನೇ ಇರಲಿ ಕಳೆದ ಏಳು ದಿನಗಳಿಂದ ಆರ್ಯ ಈಡಿಗಾ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ಕೈಗೊಂಡಿದ್ದ ಬೃಹತ್ ಪಾದಯಾತ್ರೆ ಇಂದು ಅಂತ್ಯವಾಗಿದ್ದು, ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದ್ದು ಸಮಾಜದ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.