Monday, December 23, 2024

ನಾಯಕತ್ವ ಸಮಸ್ಯೆ ಇತ್ಯರ್ಥ, ಪ್ರಮೋದ್ ಸಾವಂತ್ ಮುಂದಿನ ಗೋವಾ ಸಿಎಂ

ಪಣಜಿ (ಗೋವಾ): ಶಾಸಕಾಂಗ ಪಕ್ಷದ ಸಭೆಗೆ ಮುನ್ನ, ಭಾರತೀಯ ಜನತಾ  ಪಕ್ಷದ ಶಾಸಕ ಸುಭಾಷ್ ಫಲ್ ದೇಸಾಯಿಯವರು ಶನಿವಾರ ನಾಯಕತ್ವದ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.

“ಇನ್ನು ಮುಂದೆ ಗೋವಾದ ವಿಷಯದ ಬಗ್ಗೆ ಚರ್ಚೆ ಅಗತ್ಯವಿಲ್ಲ.  ನಾಯಕತ್ವ ಸಮಸ್ಯೆ ಇತ್ಯರ್ಥವಾಗಿದ್ದು, ಪ್ರಮೋದ್ ಸಾವಂತ್ ಮುಂದಿನ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಈಗಾಗಲೇ ಗೋವಾ ಸರ್ಕಾರವನ್ನು ಪ್ರಮೋದ್ ಸಾವಂತ್ ಅವರೇ ಮುನ್ನಡೆಸುತ್ತಾರೆ ಎಂದು ಹೇಳಿದ್ದರು. ಆದರೆ  ಆ ನಂತರವೂ ಸಾವಂತ್ ಮುಖ್ಯಮಂತ್ರಿಯಾಗುವುದರ ಬಗ್ಗೆ ಚರ್ಚೆಗಳು ನಡೆದಿದ್ದವು. ಅದಕ್ಕೆ ಸುಭಾಷ್ ಫಲ್ “ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ನಿರ್ದರಿಸಲು ನಮಗೆ ಸಮಯ ಬೇಕಾಗುತ್ತದೆ. ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗುತ್ತಾರೆ ಎಂದು ನೂರು ಬಾರಿ ಹೇಳಿದ್ದೇನೆ. ಅವರು ಗೋವಾದ ಮುಖ್ಯಮಂತ್ರಿಯಾಗಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಆದಷ್ಟು ಬೇಗ ನಡೆಸಲಾಗುವುದು” ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES