Monday, December 23, 2024

ಕೃಷ್ಣನಗರಿ ಮಥುರಾದಲ್ಲಿ ಅಕ್ರಮ ಶಸ್ತ್ರಾಸ್ತ್ರ ಘಟಕ ಪತ್ತೆ

ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿ ಅಕ್ರಮ ಶಸ್ತ್ರಾಸ್ತ್ರ ಘಟಕವೊಂದನ್ನು ಪೊಲೀಸರು ಪತ್ತೆಹಚ್ಚಿರುವ ಸುದ್ದಿ ವರದಿಯಾಗಿದೆ. ಯುಪಿ ಚುನಾವಣೆಯ ಹೊಸ್ತಿಲಿನಲ್ಲಿರುವ ಈ ಹೊತ್ತಿನಲ್ಲಿ ಮಥುರಾದ ದೌಲತ್​ಪುರ ಏರಿಯಾದಲ್ಲಿ ಈ ಅಕ್ರಮ ಶಸ್ತ್ರಾಸ್ತ್ರ ಘಟಕವನ್ನು ಪತ್ತೆ ಹಚ್ಚಿರುವ ಪೊಲೀಸರು ಅದರ ಮಾಲೀಕನನ್ನು ಬಂಧಿಸಿದ್ದಾರೆ.

ಈ ಸಂಬಂಧ SSP ಗೌರವ್ ಗ್ರೋವರ್ ಹೇಳಿರುವಂತೆ “ನಾವು ಅಕ್ರಮ ಶಸ್ತ್ರಾಸ್ತ್ರ ಘಟಕದ ಮೇಲ್ವಿಚಾರಕನನ್ನು ಬಂಧಿಸಿದ್ದೇವೆ. ಆದರೆ ಇದಕ್ಕೆ ಹಣಕಾಸಿನ ಸಹಾಯ ಮಾಡುತ್ತಿದ್ದ ಮುಖ್ಯ ಆರೋಪಿಯ ಶೋಧದಲ್ಲಿದ್ದೇವೆ” ಎಂದು ಹೇಳಿದ್ದಾರೆ. ಬಂಧಿತ ಆರೋಪಿ ಸಹುನ್ ದೌಲತ್​ಪುರ ಬಡಾವಣೆಯ ನಿವಾಸಿಯೆನ್ನಲಾಗಿದೆ.

RELATED ARTICLES

Related Articles

TRENDING ARTICLES