Sunday, January 5, 2025

ಕಾಶ್ಮೀರವನ್ನು ಕೇಂದ್ರಸರ್ಕಾರ ಸೇನಾ ನೆಲೆಯನ್ನಾಗಿ ಮಾಡುತ್ತಿದೆ-ಮೆಹಬೂಬ ಮುಫ್ತಿ ಆರೋಪ

ಜಮ್ಮುಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ಪ್ರವಾಸಿ ತಾಣಗಳನ್ನು ಸೇನಾ ನೆಲೆಗಳನ್ನಾಗಿ ಪರಿವರ್ತಿಸುತ್ತಿದೆ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಟ್ವಿಟ್ ಮಾಡಿ ಆಪಾದಿಸಿದ್ದಾರೆ. ಕಾಶ್ಮೀರ ಪ್ರವಾಸಿ ಸ್ಥಳಗಳಲ್ಲಿನ 170 ಎಕರೆ ಜಾಗವನ್ನು ಸಶಸ್ತ್ರ ಪಡೆಗಳ ಅಗತ್ಯತೆಗಳಿಗಾಗಿ ಆಯಕಟ್ಟಿನ ಪ್ರದೇಶಗಳೆಂದು ಘೋಷಿಸಿ ಜಮ್ಮು ಕಾಶ್ಮೀರ ಆಡಳಿತವು ಹೊರಡಿಸಿರುವ ಅಧಿಸೂಚನೆಯು ಇದೀಗ ಭಾರಿ ವಿವಾದಕ್ಕೊಳಗಾಗಿದೆ. ಕೇಂದ್ರ ಸರ್ಕಾರ ಈ ರೀತಿ ಭೂಮಿ ಕಬಳಿಸುವ ಮೂಲಕ ಇಲ್ಲಿನ ಸ್ಥಳೀಯರನ್ನು ನಿರಾಶ್ರಿತರನ್ನಾಗಿ ಮಾಡುತ್ತಿದೆ ಎಂದು ಮುಫ್ತಿ ಹೇಳಿದ್ದಾರೆ.

ಕಾಶ್ಮೀರದ ಪ್ರಸಿದ್ಧ ಸ್ಕೈ ರೆಸಾರ್ಟ್​ ಇರುವ ಪ್ರದೇಶದಲ್ಲಿ 130 ಎಕರೆ ಜಾಗವನ್ನು ಹಾಗೂ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವಾದ ಸೋನ್​ಮಾರ್ಗ್​ನಲ್ಲಿನ 44 ಎಕರೆ ಜಾಗವನ್ನು ಆಯಕಟ್ಟಿನ ಪ್ರದೇಶಗಳೆಂದು ಘೋಷಿಸಿ ಜಮ್ಮು ಮತ್ತು ಕಾಶ್ಮೀರ ಆಡಳಿತವು 2021ರ ಡಿಸೆಂಬರ್ 31ರಂದು ಅಧಿಸೂಚನೆ ಹೊರಡಿಸಿದೆ. ಆದರೆ ಮುಫ್ತಿ ಅವರ ಈ ಆಪಾದನೆಯನ್ನು ಕಾಶ್ಮೀರ ವಿಭಾಗೀಯ ಆಯುಕ್ತ ಪಿ.ಕೆ.ಪೋಲೆ ತಳ್ಳಿಹಾಕಿದ್ದು, ಈ ಜಾಗದಲ್ಲಿ ಹಿಂದಿನಿಂದಲೂ ಸೇನೆ ತರಬೇತಿ ಹಾಗೂ ಇತರೆ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES