Sunday, November 24, 2024

ತಲೆನೋವಿನಿಂದ ಬಳಲುತ್ತಿದ್ದೀರಾ

ತಲೆನೋವು ಹೋಗಲಾಡಿಸುವುದು ಹೇಗೆ: ಚಳಿಗಾಲದಲ್ಲಿ ತಲೆನೋವು ಮತ್ತು ದೇಹದ ನೋವಿನ ಸಮಸ್ಯೆ ಹೆಚ್ಚಾಗುತ್ತದೆ. ಈ ಬ್ಯೂಸಿ ಜೀವನದಲ್ಲಿ, ನಾವು ನಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರುತ್ತೇವೆ. ಈ ಕಾರಣದಿಂದಾಗಿ ನಾವು ಆರೋಗ್ಯಕರ ಆಹಾರವನ್ನು ಸೇವನೆ ಮಾಡೋದಿಲ್ಲ ಜೊತೆಗೆ ನಮ್ಮ ಆರೋಗ್ಯವನ್ನು ನೋಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಇದರಿಂದ ತಲೆನೋವು ನಿವಾರಣೆಯಂತಹ ಸಮಸ್ಯೆಗಳು ನಮ್ಮನ್ನು ಕಾಡತೊಡಗುತ್ತವೆ.

ಕೆಲವೊಮ್ಮೆ ಹೊಟ್ಟೆಯ ಗ್ಯಾಸ್‌ನಿಂದಲೂ ತಲೆನೋವಿನ ಸಮಸ್ಯೆ ಬರಬಹುದು. ಹೊಟ್ಟೆಯಲ್ಲಿ ಗ್ಯಾಸ್ ನಿಂದಾಗಿ ಅಜೀರ್ಣವಾಗುತ್ತದೆ ಎಂಬ ಸಾಕಷ್ಟು ದೂರುಗಳಿವೆ. ಹೊಟ್ಟೆಯನ್ನು ಸರಿಯಾಗಿ ಶುಚಿಗೊಳಿಸದ ಕಾರಣ, ಕೆಲವೊಮ್ಮೆ ಯಾವುದೇ ಕೆಲಸ ಮಾಡಲು ಮನಸ್ಸಿರೋದಿಲ್ಲ ಮತ್ತು ಇದರಿಂದ ತಲೆನೋವಿನ ಸಮಸ್ಯೆಯು ಬಹಳಷ್ಟು ಕಾಡುತ್ತದೆ. ತಲೆನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕರು ಇಂಗ್ಲೀಷ್ ಮೆಡಿಶಿನ್ ಔಷಧಗಳನ್ನು ಸೇವಿಸುತ್ತಾರೆ. ಆದರೆ ಔಷಧಿಗಳಿಲ್ಲದ ಕೆಲವು ಮನೆಮದ್ದುಗಳಿಂದ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಹಾಗಾದರೆ ತಲೆನೋವು ನಿವಾರಿಸಲು ಏನ್ ಮಾಡಬೇಕು ಅನ್ನೋದರ ಬಗ್ಗೆ ತಿಳಿಯೋಣ.

  1. 1. ತುಳಸಿ (Basil): ನಿಮಗೆ ತಲೆನೋವು, ನೆಗಡಿ ಮತ್ತು ಕೆಮ್ಮು ಇದ್ದರೆ ನೀವು ತುಳಸಿ ಎಲೆಗಳನ್ನು ಸೇವಿಸಬಹುದು. ತುಳಸಿ ಎಲೆಗಳಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ತಲೆನೋವು ಮತ್ತು ಹೊಟ್ಟೆಯ ಗ್ಯಾಸ್‌ನಿಂದ ಪರಿಹಾರ ದೊರೆಯುತ್ತದೆ.
  2. ಅಮೃತಬಳ್ಳಿ (Giloy): ಅಮೃತಬಳ್ಳಿ ಒಂದು ಆಯುರ್ವೇದ ಮೂಲಿಕೆ. ಅಮೃತಬಳ್ಳಿ ಜ್ಯೂಸ್ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯನ್ನು ನಿವಾರಿಸಬಹುದು ಮತ್ತು ತಲೆನೋವಿನಿಂದ ಮುಕ್ತಿ ಪಡೆಯಬಹುದು.
  3. 3. ಹಿಪ್ಪಲಿ (Long pepper): ಇದು ಒಂದು ಔಷಧೀಯ ಸಸ್ಯ. ಹಿಪ್ಪಲಿ ಚೂರ್ನಾವನ್ನು ಬಳಸುವುದರಿಂದ ಹೊಟ್ಟೆಯ ಅನಿಲ ಮತ್ತು ಆಮ್ಲೀಯತೆಯನ್ನು ನಿವಾರಿಸಬಹುದು. ಮತ್ತು ಗ್ಯಾಸ್‌ನಿಂದಾಗಿ ತಲೆಯಲ್ಲಿನ ನೋವನ್ನು ಸಹ ನಿವಾರಿಸಬಹುದು. ಅಲ್ಲದೆ ಇದು ಸ್ತನ, ಶ್ವಾಸಕೋಶ, ಪ್ರಾಥಮಿಕ ಮಿದುಳಿನ ಗೆಡ್ಡೆಗಳು ಮತ್ತು ಗ್ಯಾಸ್ಟ್ರಿಕ್, ಕ್ಯಾನ್ಸರ್ ಸೇರಿದಂತೆ ವಿವಿಧರೋಗಗಳಿಗೆ ಔಷಧಿಯಾಗಿದೆ. ಆಸ್ತಮಾಕ್ಕೆ ಉತ್ತಮ ಗಿಡ ಮೂಲಿಕೆಯಾಗಿದೆ.

R.ರಮ್ಯ, ಪವರ್ ಟಿವಿ

RELATED ARTICLES

Related Articles

TRENDING ARTICLES