Monday, December 23, 2024

‘ಪುನೀತ್​ ನಮನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ’

ಬೆಂಗಳೂರು : ನಾಳೆ ಅರಮೆನೆ ಮೈದಾನದ ಪ್ಯಾಲೇಸ್​ ಗ್ರೌಂಡ್​ನ ಗಾಯತ್ರಿ ವಿಹಾರದಲ್ಲಿ  ಪುನೀತ್​  ನಮನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್​ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮ  ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ 2000 ಜನರಿಗೆ ಮಾತ್ರ ಅವಕಾಶ. ಪಾಸ್​ ಇದ್ದವರಿಗೆ ಪುನೀತ್​ ನಮನ ಕಾರ್ಯಕ್ರಮಕ್ಕೆ ಎಂಟ್ರಿ. ಗೀತ ರಚನೆಕಾರ ನಾಗೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಗುರುಕಿರಣ್  ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ಪುನೀತ್​ಗೆ ಗೀತ ನಮನ.

ಕಾರ್ಯಕ್ರಮದಲ್ಲಿ  ಉಪೇಂದ್ರ, ರವಿಚಂದ್ರನ್‌, ಗಣೇಶ್‌, ಧ್ರುವಸರ್ಜಾ,  ಶ್ರೀಮುರಳಿ,  ಸುದೀಪ್‌, ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ , ದಕ್ಷಿಣ ಭಾರತದಿಂದ ವಿಜಯ್‌, ರಜನಿಕಾಂತ್‌, ಚಿರಂಜೀವಿ, ಜ್ಯೂ.ಎನ್‌ಟಿಆರ್‌, ಪ್ರಭಾಸ್‌, ನಾಗಾರ್ಜುನ, ಅಲ್ಲುಅರ್ಜುನ್‌, ಮೋಹನ್‌ ಲಾಲ್‌,  ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಮಾಜಿ ಸಿಎಂಗಳು ಸೇರಿ ಹಲವರು ಭಾಗಿಯಾಗುವ  ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES