ಕಲಬುರಗಿ : ಮಹಾಮಾರಿ ಕೊರೋನಾ ವೈರಸ್ ಬಹುತೇಕರ ಬದುಕನ್ನ ಈಗಾಗಲೇ ಕಿತ್ತುಕೊಂಡಿದೆ. ಇದಕ್ಕೆ ಜಿಲ್ಲೆಯ ಬಹುತೇಕ ಖಾಸಗಿ ಶಾಲಾ ಶಿಕ್ಷಕರು ಸಹ ಹೊರತಾಗಿಲ್ಲ.
ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬಹುತೇಕ ಖಾಸಗಿ ಶಾಲೆ ಶಿಕ್ಷಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಫೆಬ್ರವರಿ-ಮಾಚ್೯ ತಿಂಗಳಲ್ಲಿ ಕೊರೋನಾ ಬಂದ ನಂತರ ಲಾಕ್‌ಡೌನ್ ಆಗಿದ್ದರಿಂದ ಶಾಲೆಗಳು ಬಂದ್ ಆಗಿದ್ದರಿಂದ ಖಾಸಗಿ ಶಾಲೆ ಶಿಕ್ಷಕರು ಇದೀಗ ತಮ್ಮ ಕುಟುಂಬದ ನಿರ್ವಹಣೆಯನ್ನ ಮಾಡಲು ದನ ಮೇಯಿಸುವ ಮತ್ತು ಗಾರೆ ಕೆಲಸ ಮಾಡುತ್ತಿದ್ದಾರೆ. ಇವ್ರಿಗೆ ಈ ಕೆಲಸ ಮೂಲ ಕಾಯಕವಾಗಿದ್ರೆ ಯಾರು ವಿಚಾರ ಮಾಡೋ ಪ್ರಶ್ನೆ ಬರ್ತಿರಲಿಲ್ಲ. ಆದರೆ ಸಂಬಳವಿಲ್ಲದೇ ನೂರಾರು ಜನ ಶಿಕ್ಷಕರ ಹಣೆಬರಹ ಇದೆ ಆಗಿದೆ. ಮಕ್ಕಳ ಬದುಕು ಬೆಳಕಾಗಿಸುವ ಗುರುಗಳ ಜೀವನವೇ ಕತ್ತಲೆಯಲ್ಲಿ ಮುಳುಗಿದ್ದರು ಸಹ ಸರ್ಕಾರ ಮಾತ್ರ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಇದುವರೆಗೆ ಮುಂದಾಗದೇ ಇರುವುದು ನಿಜಕ್ಕೂ ದುರಂತವೇ ಸರಿ.
-ಅನಿಲ್‌ಸ್ವಾಮಿ