ತುಮಕೂರು: ಶಿರಾ ಉಪ ಚುನಾವಣೆ ಘೋಷಣೆಗೂ ಮುನ್ನವೇ ರಂಗೇರಿದೆ. ಶಿರಾ ಶಾಸಕ ಸತ್ಯನಾರಾಯಣ್ ನಿಧನದಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಇತ್ತ ದಿವಂಗತ ಸತ್ಯನಾರಾಯಣ್ ಶಾಸಕರಾಗಿದ್ದ ಜೆಡಿಎಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇನ್ನೂ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್ ಕೂಡ ನಾನು ಜೆಡಿಎಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿದ್ದೇನೆ ಎಂದು ಪವರ್ ಟಿವಿಗೆ ತಿಳಿಸಿದ್ದಾರೆ.
ಅಲ್ಲದೆ ರಾಜಕೀಯ ಕುಟುಂಬದಲ್ಲಿ ಹುಟ್ಟಿ ರಾಜಕೀಯದ ಆಸೆ ಇಲ್ಲ ಅಂದ್ರೆ ತಪ್ಪಾಗುತ್ತೆ, ನಾನಾದರೂ ಸರಿ ನಮ್ಮ ತಾಯಿಯವರ ಆದ್ರು ಸರಿ ಜನರ ಸೇವೆ ಮಾಡಿಕೊಂಡಿರುತ್ತೇವೆ. ದೇವೇಗೌಡರ ಕುಟುಂಬ ಹಾಗೂ ಕಾರ್ಯಕರ್ತರ ಮಾರ್ಗದರ್ಶನದಂತೆ ನಡೆಯುತ್ತವೆ ಎನ್ನುವ ಮೂಲಕ ನಾನೂ ಕೂಡ ಜೆಡಿಎಸ್ ನ ಪ್ರಬಲ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಅಲ್ಲದೆ ಬಿಜೆಪಿಗೆ ಮಧುಸ್ವಾಮಿ ಅವರು ಆಹ್ವಾನ ನೀಡಿದ್ದು ಕೂಡ ನಿಜವಾಗಿದ್ದು, ನಾವು ಜೆಡಿಎಸ್ ಪಕ್ಷದ ಅನ್ನ ತಿಂದಿದ್ದೇವೆ ತಾಲ್ಲೂಕಿನ ಜನತೆಗೆ ಋಣಿಯಾಗಿದ್ದೇವೆ ಹಾಗಾಗಿ ಬಿಜೆಪಿಗೆ ಸೇರುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದೇವೇಗೌಡರು ನಮಗೆ ಟಿಕೆಟ್ ಕೊಟ್ಟೆ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸತ್ಯಪ್ರಕಾಶ್ ತಿಳಿಸಿದರು.
-ಹೇಮಂತ್ ಕುಮಾರ್