ದ.ಕ : ಆಡು ಮೇಯಿಸಲು ತೆರಳಿದ್ದ ಯುವತಿಯನ್ನ ಮಾನಭಂಗಕ್ಕೆ ಯತ್ನಿಸಿದ ಭಿನ್ನಕೋಮಿನ ಯುವಕನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಒಡೆತ ತಿಂದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿ ಸಾದಿಕ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಯುವತಿ ನಿರ್ಜನ ಪ್ರದೇಶದತ್ತ ಆಡು ಮೇಯಿಸಲು ಹೋಗಿದ್ದನ್ನ ಗಮನಿಸಿದ್ದ ಆರೋಪಿ ಸಾದಿಕ್ ಆಕೆಯನ್ನ ಹಿಂಬಾಲಿಸಿಕೊಂಡು ಹೋಗಿದ್ದು, ಆಕೆಯ ಕೈ ಹಿಡಿದೆಳೆದಿದ್ದಾನೆ. ಇಷ್ಟಾಗುತ್ತಲೇ ಯುವತಿ ಕಿರುಚಾಡಿದ್ದು, ಅಲ್ಲೇ ಸಮೀಪದಲ್ಲಿದ್ದ ಆಕೆಯ ಸಹೋದರ ಓಡಿಕೊಂಡು ಬಂದಿದ್ದು ಯುವಕನನ್ನ ತಕ್ಷಣವೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಅಲ್ಲದೇ ಆತ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, ಆರೋಪಿ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ. ಆ ಬಳಿಕ ಬೆಳ್ತಂಗಡಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದು, ಆರೋಪಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು