Monday, February 3, 2025

ಪವರ್​ ಟಿವಿಗೆ ಧನ್ಯವಾದ ತಿಳಿಸಿದ ತಹಶೀಲ್ದಾರ್ ನಾಗರಾಜ್!

ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣದ ಹೊರ ವಲಯದ ಸಿದ್ದರಾಮ ನಗರದ ಬಳಿಯ ಸ್ಥಗಿತವಾಗಿರೊ ಕಲ್ಲಿನ ಕ್ವಾರಿ ಯಲ್ಲಿ ಅಳವಾದ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ನೀರು ತುಂಬಿದೆ ಹಾಗಾಗಿ ಇಲ್ಲಿನ ಪ್ರದೇಶದ ಸಾಕಷ್ಟು ಅಪಾಯಕಾರಿಯಾಗಿದೆ.

ನಿಂತಿರೊ ನೀರಿನಲ್ಲಿ ಸ್ಥಳೀಯರು ಇಲ್ಲಿಗೆ ಈಜಾಡುವ ವೇಳೆ ಹಾಗು ಜಾನುವಾರುಗಳು ಇಲ್ಲಿ‌ನೀರು ಕುಡಿಯುವ ಸಂದರ್ಭದಲ್ಲಿ ಸಾವುನೋವುಗಳು ಸಂಭವಿಸುವ ಸಾಧ್ಯತೆ ಕುರಿತು ನಿಮ್ಮ ಪವರ್ ಟಿವಿ ಎಳೆಎಳೆಯಾಗಿ ಸುದ್ದಿಯನ್ನ ಬಿತ್ತರಿಸಿತ್ತು. ವರದಿ ಪ್ರಸಾರದ ನಂತರ ಎಚ್ಚತ್ತ ತಾಲ್ಲೂಕು ಅಡಳಿತ ಗಣಿ ಪ್ರದೇಶಕ್ಕೆ ಟ್ರೆಂಚ್ ಹಾಕಿ ಎಚ್ಚರಿಕೆಯ ನಾಮ ಫಲಕಗಳನ್ನು ಹಾಕಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್​ರವರು ಪವರ್ ಟಿವಿಯ ಸುದ್ದಿ ಬಿತ್ತರಿಸಿ ತಾಲ್ಲೂಕು ಅಡಳಿತ ಗಮನ ಸೆಳೆದಿದ್ದಕ್ಕೆ ಪವರ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES