ಬಾಗಲಕೋಟೆ : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಿರೋ ಬೆನ್ನಲ್ಲೆ ಕೋವಿಡ್ ಸೋಂಕಿತರ ಸೇವೆಗೆ ಅವಕಾಶ ಕೊಡಿ ನಾವು ಅವರಿಗೆ ಚಿಕಿತ್ಸೆ ನೀಡುವ ಮೂಲಕ ಸೇವೆ ಮಾಡ್ತೀವಿ, ನಮಗೂ ಒಂದು ಬದುಕು ನೀಡಿ ಎಂಬ ಮನವಿಯೊಂದಿಗೆ ನಿಂತಿರೋ ಇವ್ರು ಬಾಗಲಕೋಟೆ ಜಿಲ್ಲೆಯ ರಾಜ್ಯ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಷರು. ರಾಜ್ಯದಲ್ಲಿ 1997ರಲ್ಲಿ ಈ ಹುದ್ದೆ ಸೃಷ್ಟಿಯಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಡಿಪ್ಲೋಮೋ ಇನ್ ಆಪರೇಷನ್ ಥೇಯಟರ್ ಟೆಕ್ನಾಲಾಜಿ/ ಅನೆಸ್ತೇಸಿಯಾ ಟೆಕ್ನಾಲಿಜಿ ಪದವಿ ಓದಿರೋ ಬರೋಬ್ಬರಿ 5 ರಿಂದ 6 ಸಾವಿರ ಜನ ಶಸ್ತ್ರಚಿಕಿತ್ಸಾ ಕೊಠಡಿ ತಂತ್ರಜ್ಞರು ಹಾಗೂ ಅರವಳಿಕೆ ತಜ್ಞರಿದ್ದಾರೆ. ಆದ್ರೆ ಇಲ್ಲಿಯವರೆಗೂ ಸರ್ಕಾರ ಅವರ ನೇಮಕಾತಿ ಮಾಡಿಯೇ ಇಲ್ಲ. ಇತ್ತೀಚಿಗೆ 1200 ಹುದ್ದೆಗಳಿಗೆ ನೇಮಕಾತಿ ಆದೇಶವಿದ್ದಾಗಲೇ ಕೋವಿಡ್ ಬಂದಿದ್ದರಿಂದ ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲೇ ಕಡತ ಉಳಿದುಕೊಂಡಿದೆ. ಹೀಗಾಗಿ ಅತ್ತ ನೇಮಕಾತಿ ಅತಂತ್ರವಾಗಿದ್ದೇವೆ, ಈಗ ಕೋವಿಡ್ ಸೋಂಕಿತರ ಸೇವೆಗಾದ್ರೂ ನಮಗೆ ಅವಕಾಶ ನೀಡಿ, ಪೂರ್ಣ ನೇಮಕಾತಿ ಇಲ್ಲವೆ ಒಳಗುತ್ತಿಗೆ ನೇಮಕ ಮಾಡಿಕೊಂಡ್ರೂ ಸಾಕು ನಾವು ಸೋಂಕಿತರ ಸೇವೆ ಮಾಡಲು ಸನ್ನದ್ದ ಎಂದು ಮನವಿ ಮಾಡಿದ್ದಾರೆ.
ಇನ್ನು ರಾಜ್ಯದಲ್ಲಿ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 6 ಪೋಸ್ಟ್, ತಾಲೂಕು ಕೇಂದ್ರಗಳಲ್ಲಿ 3 ಪೋಸ್ಟ್ ಸೇರಿದಂತೆ ನೂರಾರು ಪೋಸ್ಟ್ಗಳ ಬೇಡಿಕೆಯೂ ಸಹ ಇದೆ. ಆದ್ರೆ ಸರ್ಕಾರ ಮಾತ್ರ ಇದ್ಯಾವುದಕ್ಕೂ ಮನಸ್ಸು ಮಾಡ್ತಿಲ್ಲ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ಸಹ ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮನ್ನು ಕಡೆಗಣಿಸಿದಂತೆ ವರ್ಷಗಳೇ ಕಳೆದು ನಮಗೆ ನೌಕರಿಗೆ ಅವಕಾಶ ಇಲ್ಲದಂತಾಗುತ್ತೇ. ಈಗ ಸರ್ಕಾರದ ಮುಂದಿರೋ 1200 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಕನಿಷ್ಟ ಒಳಗುತ್ತಿಗೆಯಲ್ಲಾದ್ರೂ ನೇಮಕಾತಿ ಮಾಡಿಕೊಂಡ್ರೆ ಕೋವಿಡ್ ಸಂದರ್ಭದಲ್ಲೂ ನಾವು ಚಿಕಿತ್ಸೆ ಸೇವೆ ಮಾಡಲು ರೆಡಿ ಅಂತ ಮನವಿ ಮಾಡಿದ್ದಾರೆ.
ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ