Monday, February 3, 2025

ನಿನ್ನೆ ಯುವಕನ ಬರ್ಭರ ಹತ್ತೆ ಪ್ರಕರಣ, ಇಂದು ಶವವಿಟ್ಟು ಪ್ರತಿಭಟನೆ

ವಿಜಯಪುರ : ಪಟ್ಟಣದ ನಡು ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಹಾಡಹಗಲೇ ಅನೀಲ್ ಎಂಬ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಭರ ವಾಗಿ ಹತ್ಯೆ ಮಾಡಲಾಗಿತ್ತು. ಇದನ್ನು ಖಂಡಿಸಿ ಇಂದು ಸಿಂದಗಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಮೃತ ಯುವಕನ ಶವವಿಟ್ಟು ಮೃತನ ಬೆಂಬಲಿಗರು ಮತ್ತು ಗ್ರಾಮದ ಯುವಕರು ಪ್ರತಿಭಟನೆ ಮಾಡಿ ಕೂಡಲೆ ಹತ್ಯೆಗೈದಿರುವ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಅಲ್ಲದೆ ಸಿಂದಗಿಯಲ್ಲಿ ಇಂತಹ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರತಿಭಟನಾಕಾರರ ಒತ್ತಾಯಿಸಿದರು…

RELATED ARTICLES

Related Articles

TRENDING ARTICLES