ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ಹಲವಾರು ವರ್ಷಗಳ ಕಾಲ ಸಕಾಲಕ್ಕೆ ಮಳೆಯಾಗದೆ ಇಲ್ಲಿನ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದರು. ಆದ್ರೆ ಈ ಬಾರಿ ವರುಣನ ಕೃಪಾಕಟಾಕ್ಷದಿಂದ ಜಿಲ್ಲೆಗೆ ಉತ್ತಮ ಮಳೆಯಾಗಿರೋ ಹಿನ್ನಲೆ, ಈ ಬಾಗದ ರೈತರು ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಕೂನು ಬೇವು, ಬೆಳಗಟ್ಟ, ಡಿ.ಎಸ್ ಹಳ್ಳಿ, ಇಂಗಳದಾಳ್ ಗ್ರಾಮಗಳ ಜಮೀನುಗಳಲ್ಲಿ ಮೆಕ್ಕೆಜೋಳ ಬೆಳೆಗೆ ಕೀಟದ ಬಾಧೆ ಶುರುವಾಗಿದೆ. ಇದರಿಂದ ಸಂಪೂರ್ಣವಾಗಿ ಫಸಲು ನಾಶವಾಗೋ ಸಾದ್ಯತೆ ಇದೆ. ಇನ್ನೂ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳಿಗೆ ಈ ಬಾಗದ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಸರ್ಕಾರ ರೈತರ ಸಹಾಯಕ್ಕೆ ಮುಂದಾಗ ಬೇಕು ಅಂತ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.