ಶಿವಮೊಗ್ಗ : ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗಳೂರಿನಿಂದ ಜೋಗಕ್ಕೆ ಬಂದಿದ್ದ ವ್ಯಕ್ತಿ ಸುಮಾರು 3 ಗಂಟೆಗಳ ಕಾಲ ರಂಪಾಟ ಮಾಡಿರುವ ಘಟನೆ ಜೋಗ ಫಾಲ್ಸ್ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗಜಲಪಾತದ ರಾಣಿ ಫಾಲ್ಸ್ ತುದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ಮೇಲೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಅಂದಹಾಗೆ, ಚೇತನ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗಳೂರಿನಿಂದ ಬಂದಿದ್ದನಂತೆ. ತನ್ನ ಮನೆಯಲ್ಲಿನ ವಾತಾವರಣದಿಂದ ಬೇಸರಗೊಂಡಿದ್ದ ಚೇತನ್ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಜೋಗಕ್ಕೆ ಬಂದಿದ್ದನಂತೆ. ನಂತರ ರಾಣಿ ಫಾಲ್ಸ್ ಬಳಿ ಕೂತು ಯೋಚನೆ ಮಾಡಿದಾಗ ಈತನಿಗೆ ಜ್ಞಾನೋದಯವಾಗಿದೆಯಂತೆ. ನಂತರ ಅಗ್ನಿಶಾಮಕದಳದ ಸಿಬ್ಭಂಧಿ, ಡಿವೈಎಸ್.ಪಿ., ಮತ್ತು ಎಸ್.ಐ. ನಿರ್ಮಲ ಸ್ಥಳಕ್ಕೆ ಭೇಟಿ ನೀಡಿ ಚೇತನ್ ಕುಮಾರ್ ಮನವೊಲಿಸಿ ಮೇಲಕ್ಕೆ ಕರೆಸಿದ್ದಾರೆ. ನಂತರ ಜೋಗ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದು, ಮನೆಗೆ ವಾಪಾಸ್ ಕಳಿಸಲು ತಯಾರಿ ನಡೆಸಿದ್ದಾರೆ.