ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ಬೂದಿಹಾಳ ಪಿ ಎಚ್ ಗ್ರಾಮದ ಅಗಸಿಯ ಬಳಿ ನಿಂತಿದ್ದ ಯುವಕನೋರ್ವನನ್ನು ಹಾಡುಹಗಲೇ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದು ಪರಾರಿಯಾದ ಘಟನೆ ಹಾಡು ಹಗಲಿನಲ್ಲೆ ನಡೆದಿದೆ. ಅನಿಲ ಶರಣಪ್ಪ ಇಂಗಳಗಿ (24) ಮೃತ ದುರ್ದೈವಿ.
ಜಿಲ್ಲೆಯಲ್ಲಿ ಮೊನ್ನೆ ತಡರಾತ್ರಿ ಎಟಿಎಂ ದರೋಡೆ ಮಾಡಲು ವಿಫಲಯತ್ನ ನಡೆಸಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಲೆ ನಡೆದಿತ್ತು. ಘಟನೆ ಮಾಸುವ ಮುನ್ನವೇ ಮತ್ತೀಗ ಈ ದುರ್ಘಟನೆ ನಡೆದಿದೆ. ಘಟನೆ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಈತನ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು ಲಾಂಗ್ಗಳಿಂದ ಕೊಚ್ಚಿ ಬರ್ಬರವಾಗಿ ಕೊಲ್ಲಲಾಗಿದೆ. ಕೊಲೆಗೆ ಹಳೆಯ ವೈಷಮ್ಯ ಅಥವಾ ಹಣದ ವ್ಯವಹಾರ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತನ ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದೆ.
ಕೊಲೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂದಗಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.