Sunday, February 2, 2025

ಕೋಲಾರದಲ್ಲಿ ಜೆಡಿಎಸ್ ಮುಖಂಡನ ವಿರುದ್ದ ಕಿರುಕುಳದ ಆರೋಪ

ಕೋಲಾರ : ಜೆಡಿಎಸ್ ಮುಖಂಡನೊಬ್ಬನ ಮಕ್ಕಳ ಕಿರುಕುಳ ತಾಳದೆ ಕೋಲಾರದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಆರೋಪವು ಕೇಳಿಬಂದಿದೆ. ಬೆಂಗಳೂರಿನ ಕೃಷ್ಣರಾಜಪುರಂ ವಾಸಿಯಾಗಿರುವ ಜೆಡಿಎಸ್ ಮುಖಂಡನ ಇಬ್ಬರು ಮಕ್ಕಳಾದ ಶ್ರೇಯಸ್ ಮತ್ತು ಸುಹಾಸ್ ಇತ್ತೀಚೆಗೆ ಲೇವಾದೇವಿಯಲ್ಲಿ ನಷ್ಟ ಹೊಂದಿದ್ದಾರೆ.
ಸಂಸ್ಥೆಯಲ್ಲಿ ಆಗಿರುವ ಈ ನಷ್ಟಕ್ಕೆ ಪಾಲುದಾರ ಬಂಗಾರಪೇಟೆ ಮೂಲದ ಅಮರೇಶ ಕಾರಣ ಅಂತ ಆರೋಪಿಸಿ ಅವ್ರು ಮೂರ್ನಾಲ್ಕು ತಿಂಗಳಿನಿಂದ ತೊಂದ್ರೆ ಕೊಡ್ತಿದ್ದಾರೆ. ಇವರ ಕಾಟಕ್ಕೆ ಭಯಬಿದ್ದು ಅಮರೇಶ ಊರಿನಿಂದ ನಾಪತ್ತೆಯಾಗಿದ್ದಾನೆ ಅಂತ ಆತನ ಕುಟುಂಬದ ಸದಸ್ಯರು ಕೋಲಾರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕೆ ನೊಂದ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

RELATED ARTICLES

Related Articles

TRENDING ARTICLES