ವಿಜಯಪುರ : ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಕಾರು ಚಾಲಕ ಯುವಕನ ಶವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿ ಬಳಿ ಪತ್ತೆಯಾಗಿದ್ದು ಯುವಕನನ್ನು ಕೊಲೆ ಮಾಡಿ ಶವ ಸುಟ್ಟು ಹಾಕಲಾಗಿದೆ. ವಿಜಯಪುರ ನಗರದ ಕುಂಬಾರ ಗಲ್ಲಿ ನಿವಾಸಿ ಅಕ್ಷಯ ಮನೋಹರ ಲವಗಿ (23) ಕೊಲೆಯಾದ ಯುವಕನಾಗಿದ್ದು ಈ ಯುವಕ ಕಳೆದ ಶುಕ್ರವಾರ ಮನೆಯಲ್ಲಿ ಡಿಸೆಲ್ ತರುತ್ತೇನೆ ಎಂದು ಹೇಳಿ ಸ್ಕೂಟರ್ ಮೇಲೆ ತೆರಳಿ ನಾಪತ್ತೆಯಾಗಿದ್ದ. ಈ ಹಿನ್ನೆಲೆ ಸಂಬಂಧಿಕರು ಹುಡುಕಾಟ ನಡೆಸಿದಾಗ ನಿನ್ನೆ ಕಂಬಾಗಿ ಬಳಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪಕ್ಕದಲ್ಲಿದ್ದ ಸ್ಕೂಟರ್ ಗುರುತು ಆಧರಿಸಿ ಶವ ಪತ್ತೆಯಾಗಿದೆ. ಆದ್ರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ್ ಧಾಮಣ್ಣವರ, ಬಬಲೇಶ್ವರ ಪಿ ಎಸ್ ಐ ಕಲ್ಲೂರ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ..