ದಾವಣಗೆರೆ : ಕೊರೋನಾ ಹಿನ್ನಲೆ ಲಾಕ್ಡೌನ್ ಆದಾಗಿನಿಂದ ವಿದ್ಯಾರ್ಥಿಗಳು ಕಾಲೇಜ್ ಇಲ್ಲದೆ ಮನೆಯಲ್ಲೆ ಕೂತಿದ್ದಾರೆ. ಕೆಲವರಿಗೆ ಕಾಲೇಜ್ ಯಾವಾಗ ಶುರುವಾಗುತ್ತೆ ಅನ್ನೊ ಬಯಕೆ ಇದ್ದರೆ, ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಇದೇ ರೀತಿ ಕಾಲೇಜ್ ರಜೆ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಎಲ್ಲದರ ಮಧ್ಯೆ ದಾವಣಗೆರೆ ಕಾಲೇಜು ಒಂದರಲ್ಲಿ ಲಾಕ್ ಡೌನ್ ರಜೆಗಳನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ, ಲಾಕ್ಡೌನ್ನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೊಸ ಹೊಸ ಅವಿಷ್ಕಾರ ಮಾಡಿದ್ದಾರೆ. ಅದು ಕೊವಿಡ್ಗೆ ಸಂಬಂಧಿಸಿದ್ದು ಎನ್ನುವುದು ಇನ್ನೂ ವಿಶೇಷವಾಗಿದೆ.
ಲಾಕ್ ಡೌನ್ ಟೈಂ ಸದುಪಯೋಗಪಡಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಮನೆಯಲ್ಲಿಯೇ ಹಲವು ಪ್ರಾಡಕ್ಟ್ ತಯಾರಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಫೂಟ್ ಅಪರೇಟೆಡ್ ಸ್ಯಾನಿಟೈಜರ್ ಸ್ಟಾಂಡ್ ಅಭಿವೃದ್ದಿ ಪಡಿಸಲಾಗಿದೆ. ಪಾದದಿಂದ ಒತ್ತಿದರೆ, ಮೇಲೆ ಸ್ಯಾನಿಟೈಸರ್ ಬರುವಂತದ್ದು, ಇದನ್ನು ಜನರು ಮನೆಯಲ್ಲಿಯೆ ತಯಾರಿಸುವ ವಿಧಾನ ಹೇಳಲಾಗಿದೆ. ಇನ್ನೊಂದು ಕಾಂಪೋನೆಂಟ್ಸ್ ಬಳಸಿ ಕೈ ಟಚ್ ಮಾಡಿದರೆ ಸಾಕು ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಪ್ರಾಡಕ್ಟ್ ತಯಾರಿಸಲಾಗಿದೆ. ಸರಳವಾಗಿ ಸಿಗುವ ಕವರ್ನಿಂದ ಮುಖ ಕವಚ ತಯಾರಿಸಲಾಗಿದೆ. ಇನ್ನೊಂದು ಮುಖ್ಯ ಅಂದರೆ ವೈಬ್ಸ್, ಟಿಶ್ಯೂ ಪೇಪರ್ ತಯಾರಿಸಲಾಗಿದೆ.
ಅಲೋವೆರಾ ಜೆಲ್ನಿಂದ ಇದನ್ನು ತಯಾರಿಸಲಾಗಿದ್ದು, ಚರ್ಮಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗಲ್ಲ, ಮಕ್ಕಳು ಸಹ ಇದನ್ನು ಬಳಸಿ ಕೊವಿಡ್ ದೂರವಾಗಿಸಬಹುದು, ಅರೇಬಿಕ್ ಮಿಶ್ರಣದೊಂದಿಗೆ ಆರೋಮ ಕಾಫಿ ಪೌಡರ್ ತಯಾರಿಸಲಾಗಿದ್ದು, ಕೊವಿಡ್ ನಿಯಂತ್ರಣಕ್ಕೆ ಇದು ರಾಮಬಾಣ ಏಕಂದ್ರೆ ಈ ಕಾಫಿ ಪುಡಿಯಲ್ಲಿ ಹಲವು ರೀತಿಯ ರೋಗ ನಿರೋಧಕ ಶಕ್ತಿ ಮಿಶ್ರಣ ಮಾಡಲಾಗಿದೆ. ಜೊತೆಗೆ ಬಳಸಿ ಬಿಸಾಡಬಹುದಾದ ಪರಿಸರ ಸ್ನೇಹಿ ಟೀ ಕಪ್ ತಯಾರಿಸಲಾಗಿದೆ. ಇದು ಬೇಗ ಕೊಳೆತ ಗೊಬ್ಬರ ಆಗುತ್ತದೆ. ಟೀ ಕಪ್ ನಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇಂತಹ ಕಪ್ಗಳು ಬೇಗ ಕೊಳೆಯುವುದರಿಂದ ಸೋಂಕು ತಡೆಗಟ್ಟಬಹುದು ಎಂಬುದು ವಿದ್ಯಾರ್ಥಿಗಳ ಲೆಕ್ಕಾಚಾರವಾಗಿದೆ. ಇನ್ನೂ ಸೋಂಕು ತಗುಲಿದರೆ ಹೋಂ ಕ್ವಾರಂಟೈನ್ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಇಮಿನ್ಯೂ ಬೂಸ್ಟರ್ ಹೆಚ್ಚಿಸಲು ಜೋಳ, ಸಕ್ಕರೆ ಮಿಶ್ರಿತ ಪದಾರ್ಥ ತಯಾರಿಸಲಾಗಿದೆ. ತಟ್ಟೆಯ ರೂಪದ ಈ ಪ್ರಾಡಕ್ಟ್ ಒಂದು ಸಾರಿ ತಿಂದರೆ ಎರಡು ದಿನ ಹಸಿವು ಆಗಲ್ಲ. ಜೊತೆಗೆ ಪೌಷ್ಟಿಕತೆ ಹೆಚ್ಚಿಸುತ್ತದೆ ಎಂದು ಜಿಎಂಐಟಿ ಪ್ರಾಶುಂಪಾಲರಾದ ಪ್ರಕಾಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಲಾಕ್ ಡೌನ್ ಟೈಂನಲ್ಲಿ ವಿದ್ಯಾರ್ಥಿಗಳು ಟೈಂ ಪಾಸ್ ಮಾಡಿದ್ರೆ ಇಲ್ಲಿನ ಜಿಎಂಐಟಿ ವಿದ್ಯಾರ್ಥಿಗಳು ಆ ಟೈಮ್ ಅನ್ನು ಸದುಪಯೋಗಪಡಿಸಿಕೊಂಡು ಕೋವಿಡ್ ಪ್ರಾಡಕ್ಟ್ ತಯಾರಿಸಿರುವುದು ಹೆಮ್ಮೆಯ ಸಂಗತಿ, ಈ ಎಲ್ಲಾ ಪ್ರಾಡಕ್ಟ್ ಮಾರುಕಟ್ಟೆಗೆ ಬರುವಂತಾಗಲಿ ಎಂಬುದು ನಮ್ಮ ಆಶಯ.