ಕಾರ್​ ಡೋರ್​ ತಗುಲಿ ಕೆಳಗೆ ಬಿದ್ದ ಮಹಿಳೆ BMTC ಬಸ್​ ಹರಿದು ಸಾ*ವು

ಬೆಂಗಳೂರು: ಕಾರಿನ ಡೋರ್‌ಗೆ ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದ ಮಹಿಳೆ ಮೇಲೆ ಬಿಎಂಟಿಸಿ ಬಸ್ ಹರಿದು ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನಡೆದಿದೆ. ಮೃತ ಮಹಿಳೆಯನ್ನು 42 ವರ್ಷದ ಸರೋಜ ಎಂದು ಗುರುತಿಸಲಾಗಿದೆ.

ಜ್ಞಾನಭಾರತಿಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸಹೋದರನ ಜೊತೆ ಮಹಿಳೆ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್‌ನ್ನು ತಕ್ಷಣ ತೆಗೆಯಲಾಗಿದೆ. ಇದರಿಂದ ಡೋರ್‌ಗೆ ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಸರೋಜಾಯವರ ಮೇಲೆ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ :ಕಾರ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ : ಸ್ಥಳದಲ್ಲೆ ಸಾ*ವನ್ನಪ್ಪಿದ ಮಾವ-ಸೊಸೆ

ಘಟನ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮಹಿಳೆಯ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 10 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡುತ್ತಾರೆ ಎಂದು ತಿಳಿದು ಬಂದಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES