ಹಾಸನ: ರೇವಣ್ಣ ಸಿಎಂ ಆಗ್ತಾರೋ, ಡಿಸಿಎಂ ಆಗ್ತಾರೋ ಅದು ಭಗವಂತನ ಇಚ್ಛೆ. ಆ ಸಮಯ ಬಂದಾಗ ಯಾರೂ ಆಗೋದನ್ನು ತಡೆಯೋಕೆ ಆಗಲ್ಲ ಅಂತ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಹೇಳಿದ್ದಾರೆ.
ರೇವಣ್ಣ ಅವರಿಗೆ ಸಿಎಂ ಆಗೋ ಅರ್ಹತೆ ಇದೆ ಅಂತ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದವರೇ ಆಗಿರುವ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಅವರನ್ನ ಪಕ್ಕಕ್ಕೆ ತಳ್ಳಿ ರೇವಣ್ಣ ಅವರು ಸಿಎಂ ಆಗಲಿ ಎಂದು ಇಚ್ಛೆ ಪಡಲ್ಲ. ಮೇ 23ರ ಬಳಿಕ ಸಿದ್ದರಾಮಯ್ಯ ಅವರನ್ನ ಹಾಸನಕ್ಕೆ ಕರೆಸೋಣ. ಆಗ ಮಾತನಾಡೋಣ” ಎಂದಿದ್ದಾರೆ.