Friday, January 3, 2025

ಬಿಎಸ್​ವೈ ತೀನ್​ ದಿನ್​ ಕಾ ಸುಲ್ತಾನ್​..!

ಹುಬ್ಬಳ್ಳಿ: ಬಿಎಸ್​ವೈ ಒಮ್ಮೆ 3 ವರ್ಷ ಮುಖ್ಯಮಂತ್ರಿಯಾಗಿದ್ರು. ಇನ್ನೊಮ್ಮೆ 3 ದಿನ ಮುಖ್ಯಮಂತ್ರಿ ಆಗಿದ್ರು. ಯಡಿಯೂರಪ್ಪ ತೀನ್ ದಿನ್​ ಕಾ ಸುಲ್ತಾನ್ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಬಿಎಸ್​ವೈ ರೈತರ ಹೆಸ್ರಲ್ಲಿ ಹಸಿರು ಶಾಲು ಹಾಕಿ ನಾಟಕ ಮಾಡ್ತಾರೆ. ಮಹದಾಯಿ ವಿಚಾರದಲ್ಲಿ ಬಿಜೆಪಿ ಡಬಲ್ ಗೇಮ್ ಆಡಿದೆ” ಅಂತ ಕಮಲ ಪಾಳಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಅಭ್ಯರ್ಥಿ, ಹೇಳಿಕೆಗಳ ಬಗ್ಗೆಯೂ ಸಿದ್ದರಾಮಯ್ಯ ಟ್ವಿಟರ್​ನಲ್ಲಿ ಉತ್ತರಿಸುತ್ತಲೇ ಬಂದಿದ್ದಾರೆ. ಹಾಗೆಯೇ ತಮ್ಮನ್ನು ಬಳೆ ಹಾಕ್ಕೊಳ್ಳಿ ಅಂದ ಸಂಸದೆ ಶೋಭಾ ಕರಂದ್ಲಾಜೆಗೂ ಸಿಎಂ ಮಾತಿನ ತಿರುಗೇಟು ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES