Thursday, January 2, 2025

ಸಮನ್ವಯ ಸಮಿತಿಗೆ ಆಹ್ವಾನಿಸಿ, ಅಲ್ಲಿ ಉತ್ತರಿಸ್ತೀನಿ : ಸಿದ್ದು ಟ್ವೀಟ್​​ ಬಾಣಕ್ಕೆ ವಿಶ್ವನಾಥ್​ ತಿರುಗೇಟು

ದೋಸ್ತಿ ಮುನಿಸು ತಾರಕಕ್ಕೆ ಏರುತ್ತಿದೆ. ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ರು. ಇದೀಗ ಸಿದ್ದರಾಮಯ್ಯ ಅವರ ಟ್ವೀಟ್​ಗೆ ವಿಶ್ವನಾಥ್ ಟ್ವೀಟ್ ಮೂಲಕ ಮತ್ತೆ ತಿರುಗೇಟು ನೀಡಿದ್ದಾರೆ.
”ನನ್ನ ಹೇಳಿಕೆ ಬಹಳ ಜವಬ್ದಾರಿಯುತವಾಗಿದೆ. ಕಿಡಿಗೇಡಿತನ, ಸುಳ್ಳು ಹೇಳುವುದು ನನ್ನ ರಕ್ತದಲ್ಲಿಯೇ ಬಂದಿಲ್ಲ. ನಾನೇ ಮುಖ್ಯಮಂತ್ರಿ ಅನ್ನೋ ವಿಷಯ ಮೈತ್ರಿ ಧರ್ಮಕ್ಕೆ ಧಕ್ಕೆ. ಈ ವಿಷಯ ಪ್ರಸ್ತಾವನೆ ಸಿದ್ದರಾಮಯ್ಯನವರಿಂದಲೇ ಆಗಿದ್ದು. ಸಮನ್ವಯ ಸಮಿತಿಗೆ ನನ್ನನ್ನು ಆಹ್ವಾನಿಸಿ ಬಂದು ಉತ್ತರಿಸುತ್ತೇನೆ. ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ಕೊಡಲಿ” ಅಂತ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES