ಹೈದರಾಬಾದ್ : ಐಪಿಎಲ್ 12ನೇ ಆವೃತ್ತಿಯ ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹೈದರಾಬಾದ್ನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 149ರನ್ ಗಳನ್ನು ಮಾಡಿತು. ಮುಂಬೈ ಪರ ಕಿರಾನ್ ಪೊಲಾರ್ಡ್ ಅಜೇಯ 41, ವಿಕೆಟ್ ಕೀಪರ್ ಡಿಕಾಕ್ 29, ಇಶಾನ್ ಕಿಶಾನ್ 23 ರನ್ ಗಳಿಸಿದರು. ಇನ್ನುಳಿದ ಬ್ಯಾಟ್ಸ್ಮನ್ ಗಳಾರು 20ರ ಗಡಿ ದಾಟಲಿಲ್ಲ.
ಚೆನ್ನೈ ಪರ ದೀಪಕ್ ಚಹಾರ್ 3, ಶಾರ್ದುಕ್ ಟಾಕುರ್ ಹಾಗೂ ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಕಿತ್ತು ಮುಂಬೈ ರನ್ ಓಟಕ್ಕೆ ಬ್ರೇಕ್ ಹಾಕಿದ್ರು. ಬಳಿಕ 149ರನ್ಗಳ ಬೆನ್ನತ್ತಿದ ಚೆನ್ನೈ ಪರ ಶೇನ್ ವ್ಯಾಟ್ಸನ್ (80) ಏಕಾಂಗಿ ಹೋರಾಟ ನಡೆಸಿದರು. ಆದರೆ, ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. 1 ರನ್ ಗಳ ರೋಚಕ ಗೆಲುವು ಪಡೆದ ಮುಂಬೈ 4ನೇ ಬಾರಿ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ಹಿಂದೆ ಮುಂಬೈ 2013, 2015, 2017ರಲ್ಲಿ ಚಾಂಪಿಯನ್ ಆಗಿತ್ತು.
4ನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಮುಂಬೈ
TRENDING ARTICLES