ಹುಬ್ಬಳ್ಳಿ: ಉಪಚುನಾವಣೆ ಗೆದ್ರೆ ನಾವೇ ಸರ್ಕಾರ ರಚಿಸುತ್ತೀವಿ ಅಂತ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆ ಮುಕ್ತಾಯವಾದ ನಂತರ ಮಾತನಾಡಿದ ಅವರು, 25 ಸಾವಿರ ಮತಗಳ ಅಂತರದಿಂದ ಚಿಕ್ಕನಗೌಡರ್ ಗೆಲ್ತಾರೆ. ಸುಲಭವಾಗಿ ಗೆಲ್ತಾರೆ ಎನ್ನುವ ವಿಶ್ವಾಸ ನಮಗಿದೆ. ಡಿಕೆಶಿ ಅವರ ಆಮಿಷಕ್ಕೆ ನಮ್ಮವರು ಬಲಿಯಾಗಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಹೊಡೆದಾಡಿಕೊಳ್ತಿದ್ದಾರೆ. ಅವರು ಹೊಡೆದಾಡಿಕೊಂಡರೆ ಅದಕ್ಕೆ ನಾವು ಹೊಣೆನಾ? ‘’ ಅಂತ ಹೇಳೀದ್ದಾರೆ.