Monday, December 23, 2024

ಮತ ಚಲಾಯಿಸಿದವರಿಗೆ ಮಜ್ಜಿಗೆ..!

ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಮತಚಲಾಯಿಸಿದವರಿಗೆ ಉಚಿತ ಮಜ್ಜಿಗೆ ವಿತರಿಸಲಾಗ್ತಿದೆ. ಬಿಸಿಲಿಗೆ ಮತಚಲಾಯಿಸಲು ಬಂದ ಮತದಾರರು ತಂಪಾದ ಮಜ್ಜಿಗೆ ಕುಡಿಯುತ್ತಿದ್ದಾರೆ. ದೇಶದಲ್ಲಿ ಮೂರನೇ, ಮತ್ತು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಳ್ಳಾರಿಯ ಜನರೂ ಇಂದು ಮತಚಲಾಯಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲಾಗ್ತಿದ್ದು, ಜಾನಪದ ಹೊಟೇಲ್ ಮಾಲೀಕ ಯಲ್ಲನಗೌಡ ಶಂಕರಬಂಡೆ ಅವರು ಮತಚಲಾಯಿಸಲು ಬಂದವರಿಗೆಲ್ಲ ಮಜ್ಜಿಗೆ ಕೊಡ್ತಿದ್ದಾರೆ. ಬಳ್ಳಾರಿ ಹೋಟೆಲ್​ ಮಾಲೀಕರ ಸಂಘದಿಂದ ಮತದಾನ ಜಾಗೃತಿಗಾಗಿ ಈ ಕಾರ್ಯಕಗ್ರಮ ನಡೆಸಿದ್ದಾರೆ. ನಗರದ ಪಾರ್ವತಿ ನಗರದ ಮತಕೇಂದ್ರ ಹೊರಗಡೆ ಮಜ್ಜಿಗೆ ವಿತರಣೆ ಮಾಡಲಾಗುತ್ತಿದ್ದು, ಬಿಸಿಲಿನ ತಾಪಕ್ಕೆ ಮತದಾರರು ತಂಪು ಮಜ್ಜಿಗೆಯ ಮೊರೆ ಹೋಗಿದ್ದಾರೆ.

RELATED ARTICLES

Related Articles

TRENDING ARTICLES