ಬೆಂಗಳೂರು : ಪುಡ್ ಪ್ರಿಯರಿಗೆ ನಾಳೆಯಿಂದ ಮನೆಗೆ ಡಿಲೇವರಿ ಆಗುತ್ತೆ ಬೀದಿ ಬದಿಯ ಸ್ವೇಷಲ್ ಪುಡ್.
ವಿನೂತನ ಪ್ರಯೋಗಕ್ಕೆ ಮುಂದಾದ ಬಿಬಿಎಂಪಿ. ಬೀದಿ ಬದಿ ಆಹಾರ ಮಾರಟಗಾರರ ವಹಿವಾಟು ಹೆಚ್ಚಿಸಲು ಬಿಬಿಎಂಪಿ ಚಿಂತನೆ ನಡೆಸಲಾಗಿದೆ. ಆನ್ ಲೈನ್ನಲ್ಲಿ ಬೀದಿ ಬದಿ ಆಹಾರ ಮಾರಟಕ್ಕೆ ಬಿಬಿಎಂಪಿ ಪ್ರತಿಷ್ಟಿತ ಸ್ವಿಗ್ಗಿ,ಜೊಮೇಟೊ ದಂತಹ ಆನ್ ಲೈನ್ ಡಿಲವರಿ ಆ್ಯಫ್ ಗಳ ಜೊತೆ ಒಪ್ಪಂದಕ್ಕೆ ಮಾಡಿಕೊಳ್ಳಲು ಸಿದ್ದತೆ ನಡೆಸಿದ್ದು, ಗುಣಮಟ್ಟದ ಆಹಾರ ಪೊರೈಸಲು ಬೀದಿ ಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಿದ್ದಾರೆ.
ಇನ್ನು, ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡೆ-ನಲ್‌ಮ್)ಅಡಿಯಲ್ಲಿ ತರಬೇತಿ ನೀಡಲಾಗಿದ್ದು, ಬಿಬಿಎಂಪಿ ಅಧಿಕಾರಿಗಳಿಂದ ಆಗಸ್ಟ್ 15 ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದರು. ಅದಕ್ಕಾಗಿ ನಗರದಲ್ಲಿ ಬೀದಿ ಆಹಾರ ಮಾರಟಗಾರರ ಬಗ್ಗೆ ಮಾಹಿತಿ ಕಲೆ ಹಾಕಿದ ಬಿಬಿಎಂಪಿ. ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರಿದ್ದಾರೆ.