Sunday, October 6, 2024

ಪ್ರಧಾನಿ ನರೇಂದ್ರ ಮೋದಿ ಮನೆಗೆ ಪುಟ್ಟ ‘ದೀಪಜ್ಯೋತಿ’ ಆಗಮನ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಇಂದು ಹೊಸ ಸದಸ್ಯೆಯ ಆಗಮನವಾಗಿದೆ. ಪ್ರಧಾನಿಯವರ ಮನೆಯ ಆವರಣದಲ್ಲಿರುವ ಹಸು ಕರು ಹಾಕಿದ್ದು, ಅದಕ್ಕೆ ದೀಪಜ್ಯೋತಿ ಎಂದು ಹೆಸರಿಡಲಾಗಿದೆ. ಆ ಕರುವಿನ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕರುವಿನ ಹಣೆ ಮೇಲೆ ವಿಶಿಷ್ಟವಾದ ಗುರುತು ಇದ್ದು, ಇದು ಬೆಳಕಿನ ಸಂಕೇತವನ್ನು ಹೋಲುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಗುರುತಿಸಿ, ಪ್ರಧಾನಿ ಮೋದಿ ಅವರು ಕರುವಿಗೆ ದೀಪಜ್ಯೋತಿ ಎಂದು ಹೆಸರಿಟ್ಟಿದ್ದಾರೆ. ಪ್ರಧಾನಮಂತ್ರಿಯವರು ಕರುವನ್ನು ಮನೆಯೊಳಗೆ ಕರೆತಂದು ಅದಕ್ಕೆ ಶಾಲು ಹೊದಿಸಿ ಹೂಮಾಲೆ ಹಾಕುತ್ತಿರುವ ವಿಡಿಯೋವನ್ನು ಟ್ವೀಟ್​ ಮಾಡಿದ್ದಾರೆ.

ನಮ್ಮ ಗ್ರಂಥಗಳಲ್ಲಿ ಗಾವಃ ಸರ್ವಸುಖ ಪ್ರದಾಃ ಎಂದು ಹೇಳಲಾಗಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ ಕುಟುಂಬಕ್ಕೆ ಹೊಸ ಸದಸ್ಯೆಯೊಬ್ಬರು ಮಂಗಳಕರ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿ ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದ್ದು, ಹಣೆಯ ಮೇಲೆ ಬೆಳಕಿನ ಗುರುತು ಇದೆ. ಹಾಗಾಗಿ ಇದಕ್ಕೆ ದೀಪಜ್ಯೋತಿ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES