Sunday, October 6, 2024

ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಪಡೆದ ಭೂಪ; ಕಾರಣವೇನು ಗೊತ್ತಾ?

ಧಾರವಾಡ: ಅತಿಯಾಗಿ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ಪಡೆದು ಬ್ಯಾಂಕ್​ ಅಧಿಕಾರಿಗಳಿಗೆ ವಂಚಿಸಲು ಯತ್ನಿಸಿದ ಘಟನೆ ಇಲ್ಲಿನ ನವಲಗುಂದ ಪಟ್ಟಣದಲ್ಲಿ ನಡೆದಿದೆ.

ಗಮನಿಸಿ: ನಟ ದರ್ಶನ್​ಗೆ ಸದ್ಯಕ್ಕೆ ಸಿಗಲ್ಲ ಜಾಮೀನು; ಕಾರಣವೇನು ಗೊತ್ತಾ?

ಇಮಾಮ್ ಹುಸೇನ್ ಮುಲ್ಲಾನವರ ಎನ್ನುವ ವ್ಯಕ್ತಿ ಬದುಕಿರುವಾಗಲೇ ತನ್ನ ಮರಣ ಪತ್ರ ಪಡೆದಿದ್ದಾನೆ. ಮೌಲಾಸಾಬ್​​ ಎನ್ನುವಾತ ಇಮಾಮ್​​ ಹುಸೇನ್​ ಮರಣ ಹೊಂದಿದ್ದಾನೆ ಎಂದು ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದ. ಪುರಸಭೆಯ ಸದಸ್ಯ ತರಾತುರಿಯಲ್ಲಿ ಮರಣ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದಾನೆ. ಪುರಸಭೆ ಸದಸ್ಯ ಅಲ್ಲಿಯೇ ಇದ್ದ ಪಂಚರನ್ನು ಆಯ್ದುಕೊಂಡು ಸಹಿ ಮಾಡಿಸಿದ್ದ. ಅರ್ಜಿ ಸಲ್ಲಿಸಿದ ಮೂರೇ ದಿನಕ್ಕೆ
ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ.

ಇನ್ನು ಇಮಾಮ್​ ಹುಸೇನ್​​ ಮುಲ್ಲಾ ವಿವಿಧ ಬ್ಯಾಂಕ್​ಗಳಲ್ಲಿ ಸಾಲ ಮಾಡಿಕೊಂಡಿದ್ದ. ಆದರೆ ಇದನ್ನ ತೀರಿಸಲು ಆಗದ ಹಿನ್ನೆಲೆ ಬ್ಯಾಂಕ್​ಗೆ ವಂಚಿಸಲು ಮುಂದಾಗಿದ್ದ. ತಾನು ಸಾವನಪ್ಪಿದ್ದೇನೆ ಎಂದು ಮರಣ ಪ್ರಮಾಣ
ಪತ್ರ ನೀಡಿದರೆ ಬ್ಯಾಂಕ್​​ ಸಾಲ ಮನ್ನಾ ಆಗುತ್ತದೆ ಎಂದು ತಿಳಿದು ಜೀವಂತವಿರುವಾಗಲೇ ಮರಣ ಪ್ರಮಾಣ ಪತ್ರ ಪಡೆದಿದ್ದಾನೆ. ಸುಳ್ಳು ಮರಣ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಶಾಮಿಲಾಗಿರುವ ಶಂಕೆ ಇದೆ.
ಈ ಹಿನ್ನೆಲೆ ಜಿಲ್ಲಾಧಿಕಾರಿ ದಿವ್ಯಪ್ರಭು, ಆರೋಪಿ ಇಮಾನ್​ ಹುಸೇನ್ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.

RELATED ARTICLES

Related Articles

TRENDING ARTICLES