ಕೋಲಾರ : ಕುಡಿದ ನೆಶೆಯಲ್ಲಿ ಕುಡುಕನೋರ್ವ ರೈಲ್ವೇ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿರುವ ಘಟನೆ ಮಾಲೂರು ತಾಲ್ಲೂಕಿನ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಕಾರಿನ ಮಾಲೀಕ ರಾಕೇಶ್ ಎಂಬಾತನಿಂದ ಕೃತ್ಯ ಜರುಗಿದ್ದು. ಕುಡಿದ ನೆಶೆಯಲ್ಲಿದ್ದ ಈ ಭೂಪ ರೈಲ್ವೇ ಫ್ಲಾಟ್ಫಾರ್ಮ್ಗೆ ತನ್ನ ಕಾರನ್ನು ನುಗ್ಗಿಸಿದ್ದಾನೆ. ಫ್ಲಾರ್ಟಫಾರ್ಮ್ ಮೇಲಿಂದ ಕಾರು ರೈಲ್ವೇ ಹಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಬಂದಿರುವ ರೈಲ್ವೇ ಪೊಲೀಸರು ಟ್ರ್ಯಾಕ್ ಮೇಲಿದ್ದ ಕಾರನ್ನು ಜೆಸಿಬಿ ಮುಖಾಂತರ ತೆರವು ಗೊಳಿಸಿದ್ದಾರೆ.
ಇದನ್ನೂ ಓದಿ :ಸಾಲಭಾದೆಗೆ ಬೇಸತ್ತು ತನ್ನದೆ ಅಡಿಕೆ ತೋಟದಲ್ಲಿ ಆತ್ಮಹ*ತ್ಯೆ ಶರಣಾದ ರೈತ
ಕೃತ್ಯವೆಸಗಿದ ಕಾರು ಮಾಲೀಕ ರಾಕೇಶ್ನನ್ನು ಬಂಗಾರಪೇಟೆ ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದು. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.