Thursday, January 23, 2025

KSRTC ಬಸ್​ ಮತ್ತು ಟ್ರ್ಯಾಕ್ಟರ್​ ನಡುವೆ ಭೀಕರ ಅಪಘಾತ : 18 ಜನರಿಗೆ ಗಾಯ !

ರಾಯಚೂರು : ಕೆಎಸ್​ಆರ್​ಟಿಸಿ ಬಸ್​ ಮತ್ತು ಟ್ರ್ಯಾಕ್ಟರ್​ ನಡುವೆ ಭೀಕರ ಅಪಘಾತ ಸಂಭವಿಸಿ 18ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಬಾಗಲಕೋಟೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬನ್ನಿಗೋಳ ಗ್ರಾಮದ ಬಳಿ ಘಟನೆ ನಡೆದಿದ್ದು. ಸಾರಿಗೆ ಬಸ್​ ಮತ್ತು ಟ್ರ್ಯಾಕ್ಟರ್​ ನಡುವೆ ಸಂಭವಿಸಿದ ಈ ಅಪಘಾತದಲ್ಲಿ 18 ಜನರು ಗಾಯಗೊಂಡಿದ್ದು. ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಶ್ರೀ ದೇವಿ ಲಿಂಗಪ್ಪ ಎಂದು ಗುರತಿಸಲಾಗಿದೆ.

ಇದನ್ನೂ ಓದಿ: ಆಸ್ಪತ್ರೆಗೆ ಕರೆದೊಯ್ದಿದ್ದ ಆಟೋ ಚಾಲಕನಿಗೆ ಧನ್ಯವಾದ ಅರ್ಪಿಸಿದ ನಟ ಸೈಪ್​ ಅಲಿಖಾನ್​ !

ಗಾಯಾಳುಗಳೆಲ್ಲ ಕೂಲಿ ಕಾರ್ಮಿಕರಾಗಿದ್ದು. ಕೂಲಿ ಕೆಲಸಕ್ಕೆಂದು ಟ್ರ್ಯಾಕ್ಟರ್​ನಲ್ಲಿ ಹೋಗುವಾಗ ಘಟನೆ ನಡೆದಿದ್ದು. ಗಾಯಾಳುಗಳನ್ನು ಲಿಂಗಸಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳೆಲ್ಲರು ಬನ್ನಿಗೋಳ ಗ್ರಾಮಸ್ಥರು ಎಂದು ತಿಳಿದು ಬಂದಿದ್ದು. ಘಟನ ಸ್ಥಳಕ್ಕೆ ಮುದಗಲ್​ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES