ರಾಷ್ಟ್ರದ್ರೋಹಿ ಸೋನು ನಿಗಮ್​ನ ಬಂಧಿಸಿ ಜೈಲಿಗೆ ಅಟ್ಟಬೇಕು; ಕರವೇ ನಾರಯಣಗೌಡ

ಬೆಂಗಳೂರು : ಗಾಯಕ ಸೋನು ನಿಗಮ್ ವಿರುದ್ದ ಕರವೇ ಕಾರ್ಯಕರ್ತರು ಸಿಡಿದೆದ್ದಿದ್ದು. ನೂರಾರು ಪ್ರತಿಭಟನಾಕಾರರು ಗಾಯಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಕರವೇ ರಾಜ್ಯಧ್ಯಕ್ಷ ನಾರಾಯಣಗೌಡ ‘ ಸೋನು ನಿಗಮ್​ನನ್ನು ದೇಶದ್ರೋಹದ ಕೇಸ್​ ದಾಖಲಿಸಿ, ಜೈಲಿಗೆ ಅಟ್ಟಬೇಕು ಎಂದು ಹೇಳಿದರು.

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್​ ‘ಕನ್ನಡ, ಕನ್ನಡ ಅಂದಿದ್ದಕ್ಕೆ ಪಹಲ್ಗಾಮ್​ ದಾಳಿ ಆಯ್ತು’ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಕನ್ನಡಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಸೋನು ನಿಗಮ್​ ವಿರುದ್ದ ಅವಲಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ಕೂಡ ದಾಖಲಾಗಿತ್ತು.

ಇದನ್ನೂ ಓದಿ :ಕರಾವಳಿ ಉಗ್ರರಿಗೆ ಆಶ್ರಯ ಕೊಟ್ಟಿದೆ, ಸುಹಾಸ್​ ಹತ್ಯೆಯಲ್ಲಿ ವಿದೇಶಿಗರ ಕೈವಾಡವಿದೆ: ಎಸ್​.ಆರ್​ ವಿಶ್ವನಾಥ್​

ಸೋನು ನಿಗಮ್ ವಿರುದ್ದ ಕರವೇ ಪ್ರತಿಭಟನೆ..!

ಕನ್ನಡ ಭಾಷೆಯ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ಸೋನು ನಿಗಮ್​ ವಿರುದ್ದ ಕರವೇ  ಪ್ರತಿಭಟನೆ ಹಮ್ಮಿಕೊಂಡಿದ್ದು. ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಸೋನು ನಿಗಮ್​ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದು. ಗಾಯಕನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಕರವೇ ನಾರಯಣಗೌಡ ಆಕ್ರೋಶ..!

ಸೋನು ನಿಗಮ್ ವಿರುದ್ದದ ಪ್ರತಿಭಟನೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಾರಯಣಗೌಡ ‘ಸೋನು ನಿಗಮ್ ಒಬ್ಬ ಹುಚ್ಚ, ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಲ್ಲ ಎಂದು ಹೇಳಬಹುದಿತ್ತು. ಆದರೆ ಕಾಶ್ಮೀರದ ಭಯೋತ್ಪಾದನೆಗೆ ಹೋಲಿಸಿದ್ದು ಸರಿಯಲ್ಲ. ಅವನ ವಿರುದ್ದ ಕರವೇ ರಾಷ್ಟ್ರದ್ರೋಹದ ಕೇಸ್ ದಾಖಲಿಸಿತ್ತು. ಪೊಲೀಸರು ಆತನನ್ನು ಬಂಧಿಸಿ ಕರೆದುಕೊಂಡು ಬರಬೇಕು. ನಾಲ್ಕು ದಿನವಾದರೂ ಅವನನ್ನು ಜೈಲಿಗೆ ಕಳುಹಿಸಿದರೆ ಅವನಲ್ಲಿ ಪರಿವರ್ತನೆಯಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ :ಸುಹಾಸ್​ ಶೆಟ್ಟಿ ಹತ್ಯೆಗೂ ಮುನ್ನ ಕ್ಯಾಂಪ್​ ಫೈರ್​ ಹಾಕಿ ಪಾರ್ಟಿ ಮಾಡಿದ್ದ ಆರೋಪಿಗಳು

ಮುಂದುವರಿದು ಮಾತನಾಡಿದ ನಾರಯಣ ಗೌಡ ‘ಕರ್ನಾಟಕ ಪೊಲೀಸರು ಅವನಿಗೆ ಯಾವುದೇ ರಿಯಾಯತಿ ನೀಡಬೇಡಿ, ಆತ ನಡೆದಿರುವ ಬಗ್ಗೆ ಕ್ಷಮೆ ಯಾಚಿಸಿದ್ದರೆ ಸರಿಯಾಗುತ್ತಿತ್ತು. ಆದರೆ ಆತ ಮತ್ತೆ ವಿಡಿಯೋ ಮಾಡಿ ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಭಾಷೆ ಎಂಬುದು ಭಾವನಾತ್ಮಕ ವಿಚಾರ, ಗೃಹ ಇಲಾಖೆ ಕೂಡಲೇ ಬಂಧಿಸಬೇಕು ಎಂದು ಹೇಳಿದರು.

ಇನ್ನ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೋನು ನಿಗಮ್​ ವಿಷಯದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬೇಡಿ. ಈ ಸಮಯದಲ್ಲಿಯಾದ್ರೂ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು,  ನಿರ್ದೇಶಕರು ಈ ರೀತಿಯ ಹುಚ್ಚರಿಗೆ ಅವಕಾಶ ಕೊಡಬಾರದು. ಕನ್ನಡದ ಕಲಾವಿದರಿಗೆ ಅವಕಾಶ ಕೊಡಬೇಕು
ಸೋನು ನಿಗಮ್ ಕನ್ನಡದಲ್ಲಿ ಹಾಡದಂತೆ ನಿರ್ಬಂಧ ಹೇರಬೇಕು. ಕನ್ನಡ ಸಂಸ್ಕೃತಿ ಇಲಾಖೆ ನಡೆಸುವ ಕಾರ್ಯಕ್ರಮಗಳನ್ನ ಕನ್ನಡ ಕಲಾವಿದರಿಗೆ ಅವಕಾಶ ಕೊಡಬೇಕು. ಎಂದು ಕನ್ನಡ ಸಂಗೀತ ನಿರ್ದೇಶಕರಿಗೆ ನಾರಯಣಗೌಡ ಕರೆ ನೀಡಿದರು.

RELATED ARTICLES

Related Articles

TRENDING ARTICLES