ಬೆಂಗಳೂರು: ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಸೇರಿಕೊಂಡು ಇಂದು ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಪೂಜೆ, ಹೋಮ ಮುಂತಾದ್ದನ್ನು ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು ಈ ಪೂಜೆಯಲ್ಲಿ ಭಾಗಿಯಾಗಿ ಪ್ರಾರ್ಥಿಸಿದ್ದಾರೆ. ಇದೇ ವೇಳೆ ನಟ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಬೇಸರದ ಸಂಗತಿ. ಅವರಿಗೆ ಕಾನೂನಿನ ಕಂಟಕ ಎದುರಾಗಿದೆ. ಆ ಸಲುವಾಗಿಯೇ ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗಿದೆ ಎಂಬ ಅನುಮಾನ ಕೆಲವರಿಗೆ ಇದೆ. ಆ ಪ್ರಶ್ನೆಗೆ ನಟ ಜಗ್ಗೇಶ್ ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಒಳಿತಾಗಿ ದೇವರ ಮೊರೆ ಹೋದ ಚಿತ್ರರಂಗ
ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ ಎಂದು ಜಗ್ಗೇಶ್ ಹೇಳಿದ್ದಾರೆ.