ಬೆಂಗಳೂರು: ಗೆಳತಿ ಪವಿತ್ರಾಳಿಗೆ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್ಗೆ ಸದ್ಯಕ್ಕೆ ಜಾಮೀನು ಸಿಗುವುದಿಲ್ಲ. ದರ್ಶನ್ಗೆ ಜಾಮೀನು ಸಿಗಲಿದೆ ಎಂದು ಅಭಿಮಾನಿಗಳು ಸಂತಸಗೊಂಡಿದ್ದರು. ಆದರೆ ನಿರಾಸೆಯಾಗಿದೆ.
ಗಮನಿಸಿ: ಅಕ್ಕಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ; ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರ ರದ್ದು
ಚಾರ್ಜ್ ಶೀಟ್ ಸಲ್ಲಿಕೆಯಾದ ಕೂಡಲೇ ಜಾಮೀನು ಸಿಕ್ಕೇ ಬಿಡ್ತು ಎಂದು ಫ್ಯಾನ್ಸ್ ಕುಣಿದಾಡಿದ್ದರು. ಬೇಲ್ ಸಿಕ್ಕಿದ ಬಳಿಕ ದರ್ಶನ್ ಮೆರವಣಿಗೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಪೊರ್ಕಿ ದರ್ಶನ್ ಪೊಲೀಸ್ ಕ ಷ್ಟಡಿ ಹೊರತುಪಡಿಸಿ ಜೈಲಿನಲ್ಲಿ ಈಗಾಗಲೇ ಮೂರು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದಾನೆ.
ಡಿಜಿಟಲ್ ಎವಿಡೆನ್ಸ್ ವರದಿಗಳು ಇನ್ನೂ ಪೊಲೀಸರ ಕೈ ಸೇರದ ಹಿನ್ನೆಲೆ ಸದ್ಯಕ್ಕೆ ನಟ ದರ್ಶನ್ಗೆ ಜಾಮೀನು ಸಿಗುವುದಿಲ್ಲ. ಇದನ್ನ ಮನಗಂಡಿರುವ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲ. ಸದ್ಯ ಮತ್ತಷ್ಟು ದಿನಗಳ ಕಾಲ ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ ಕಡಿಮೆ ಇದೆ. ಕಾರಣವೆಂದರೆ, ಜಾಮೀನು ಅರ್ಜಿ ಸಲ್ಲಿಸುವ ಮುನ್ನ 3991 ಪುಟಗಳ ಚಾರ್ಜ್ ಶೀಟ್ ಪರಿಶೀಲನೆ ಮಾಡಬೇಕು. ಅದರಲ್ಲಿರುವ ನ್ಯೂನ್ಯತೆಗಳನ್ನ ಹುಡುಕಿ ಅರ್ಜಿ ಸಲ್ಲಿಸಬೇಕು. ಈ ಹಿನ್ನೆಲೆ ಜಾಮೀನು ಅರ್ಜಿ ಸಲ್ಲಿಕೆ ತಡವಾಗಲಿದೆ.