ಬೆಂಗಳೂರು: ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಹೋಮ ಹವನ ಮಾಡಲಾಗುತ್ತಿದೆ.ಇಂಡಸ್ಟ್ರಿಯ ಒಗ್ಗಟ್ಟು, ಥಿಯೇಟರ್ ಸಮಸ್ಯೆ, ನಿರ್ಮಾಪಕರ ಸಮಸ್ಯೆ ನಿವಾರಣೆಗಾಗಿ ಪೂಜೆ ಮಾಡಲಾಗುತ್ತಿದೆ.
ಈ ನಡುವೆ ಅದ್ಯಾವಾಗ ಕಲಾವಿದರ ಸಂಘದಲ್ಲಿ ಹೋಮ ಅನ್ನೋ ವಿಚಾರ ಹೊರಬೀಳ್ತಿದ್ದಂತೆ ಹಲವು ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ಈ ಪೂಜೆಯನ್ನ ಪರಪ್ಪನ ಅಗ್ರಹಾರದ ನಿವಾಸಿಯಾಗಿರುವ ದರ್ಶನ್ ಅವರಿಗಾಗಿ ಮಾಡ್ತಿರುವ ಪೂಜೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೀಗ ಈ ಎಲ್ಲ ಆರೋಪಗಳಿಗೆಲ್ಲ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕ್ಲಾರಿಟಿ ಕೊಟ್ಟಿದ್ದಾರೆ. ಈ ಪೂಜೆಯ ಯಜಮಾನರಾಗಿ ದೊಡ್ಡಣ್ಣ ಇರ್ತಾರೆ. ಸುಮಾರು ಏಳೆಂಟು ಮಂದಿ ಪುರೋಹಿತರಿಂದ ಹೋಮ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಎಸಿಪಿ ಚಂದನ್‌ಗೆ ಆವಾಜ್ ಹಾಕಿದ್ದ ನಟ ದರ್ಶನ್!
ನಟ ದರ್ಶನ್ಗೂ ಸಹ ಒಳ್ಳೆದಾಗಲಿ:
ಚಿತ್ರರಂಗ ಒಳಿತಿಗಾಗಿ ಈ ಪೂಜೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಒಳ್ಳೇದಾಗುತ್ತೆ ಅಂತಾ ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೆ ಹೋಗುತ್ತೆ. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಹೀಗಾಗಿ ಈ ಹೋಮ ಅವನಕ್ಕೆ ಎಲ್ಲರೂ ಬಂದಿದ್ದೇವೆ ಎಂದರು. ಇನ್ನು
ನಟ ದರ್ಶನ್ ವಿಚಾರವಾಗಿ ಪ್ರತಿಕ್ರಿಯಿಸಿ, ನಟ ದರ್ಶನ್ಗೂ ಸಹ ಒಳ್ಳೆದಾಗಲಿ. ದರ್ಶನ್ ಊಟಕ್ಕೆ ಕುಳಿತುಕೊಳ್ಳುವಾಗ ಎಷ್ಟು ಐಟಮ್ಸ್ ಊಟ ಇರುತ್ತಿತ್ತು ಗೊತ್ತಾ. ಊಟಕ್ಕೆಲ್ಲ ನಮ್ಮನೆಲ್ಲ ಕರೆಯೋನು. ಈಗ ಊಟ ಇಲ್ದೆ ಪರದಾಡ್ತಿದ್ದಾನೆ. ಹೊಟ್ಟೆ ಉರಿ ಆಗ್ತಿದೆ ಇದೇನೆಲ್ಲ ನೋಡಿ. ಆದರೆ ಮಾಡಿದ್ದು ಮಾತ್ರ ದೊಡ್ಡ ಅಪರಾಧ. ಕಾನೂನುನಲ್ಲಿ ಏನು ಶಿಕ್ಷೆ ಇದೆ ಅದಾಗಲೇಬೇಕು ಅಂತಾ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಒಳ್ಳೆದಾಗಲಿ ಎಂದು ಪೂಜೆ:
ಇವತ್ತಿನ ಪೂಜೆಯಲ್ಲಿ ಭಾಗಿಯಾಗಿ ತುಂಬಾ ಖುಷಿಯಾಗ್ತಿದೆ ಅಂತಾ ನಟ ಶರಣ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗಕ್ಕೆ ಒಳ್ಳೆದಾಗಲಿ ಎಂದು ಇವತ್ತು ಪೂಜೆ ಆಗ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ತೊಂದರೆಯಾಗ್ತಿದೆ. ಹೀಗಾಗಿ ಇವತ್ತಿನ ಪೂಜೆಯಿಂದ ಎಲ್ಲವೂ ಒಳ್ಳೆದಾಗುತ್ತೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು.